ಮಂಗಳೂರು ಪ್ರೆಸ್‌ಕ್ಲಬ್‌ನ ವರ್ಷದ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2020-12-02 16:41 GMT

ಮಂಗಳೂರು, ಡಿ.2: ಮಂಗಳೂರು ಪ್ರೆಸ್‌ಕ್ಲಬ್‌ನಿಂದ ದ.ಕ. ಜಿಲ್ಲೆಯ ಶ್ರೇಷ್ಠ ಸಾಧಕರಿಗೆ ನೀಡಲಾಗುವ ಮಂಗಳೂರು ಪ್ರೆಸ್ ಕ್ಲಬ್‌ನ 2020ನೇ ಸಾಲಿನ ವರ್ಷದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಿವಿಧ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದ ದ.ಕ. ಜಿಲ್ಲೆಯ ಸಾಧಕರನ್ನು ಮಂಗಳೂರು ಪ್ರೆಸ್‌ಕ್ಲಬ್ ಪ್ರಶಸ್ತಿಗೆ ಶಿಫಾರಸು ಮಾಡಬಹುದಾಗಿದೆ. ಈವರೆಗೂ ಪ್ರಶಸ್ತಿ ಪಡೆಯದ ಎಲೆಮರೆಯ ಕಾಯಿಯಂತಿರುವ ಹಿರಿಯ ಸಾಧಕರಿಗೆ ಆದ್ಯತೆ ನೀಡಲಾಗುವುದು.

ಶಿಫಾರಸಿನಲ್ಲಿ ಸಾಧಕರ ಹೆಸರು, ಖಾಯಂ ವಿಳಾಸ, ವೃತ್ತಿ, ವಯಸ್ಸು, ದೂರವಾಣಿ ಸಂಖ್ಯೆ ಮೊದಲಾದ ಮಾಹಿತಿಗಳಿರಬೇಕು. ಸಾಧಕರ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಬೇಕು. ಶಿಫಾರಸು ಪತ್ರದೊಂದಿಗೆ ಸಾಧಕರ ಸಾಧನೆಯ ಬಗ್ಗೆ 200 ಶಬ್ದಗಳಿಗೆ ಮೀರದಂತೆ ಪರಿಚಯ ಹಾಗೂ ಸಂಪೂರ್ಣ ಮಾಹಿತಿಯೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಡಿ.31,2020 ಸಂಜೆ 4 ಗಂಟೆಯ ಒಳಗಾಗಿ ಪ್ರಧಾನ ಕಾರ್ಯದರ್ಶಿ, ಮಂಗಳೂರು ಪ್ರೆಸ್‌ಕ್ಲಬ್,ಪತ್ರಿಕಾ ಭವನ ಕಟ್ಟಡ, ಉರ್ವ ಮಾರ್ಕೆಟ್ ರಸ್ತೆ, ಮಂಗಳೂರು -6 ಇಲ್ಲಿಗೆ ಕಳುಹಿಸಿ ಕೊಡಬಹುದು.

ಒಬ್ಬರಿಗೆ ಇಬ್ಬರು ಸಾಧಕರನ್ನು ಶಿಫಾರಸು ಮಾಡುವ ಅವಕಾಶವಿದೆ. ತಜ್ಞರ ಸಮಿತಿಯು ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಿದೆ. ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಪ್ರೆಸ್‌ಕ್ಲಬ್ ದಿನಾಚರಣೆ ಸಂದರ್ಭ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಮಂಗಳೂರು ಪ್ರೆಸ್‌ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News