ಕಾರ್ಮಿಕರ ಭವಿಷ್ಯನಿಧಿ ಕಚೇರಿ ಮುಂದೆ ಎಐಟಿಯುಸಿ ಪ್ರತಿಭಟನೆ

Update: 2020-12-02 16:48 GMT

ಮಂಗಳೂರು, ಡಿ.2: ಸರ್ವರ್ ಸರಿಪಡಿಸಿ, ಆನ್‌ಲೈನ್ ಹೆಲ್ಪ್‌ಡೆಸ್ಕ್ ಸ್ಥಾಪಿಸಿ, ಸ್ಕೀಂ ಸರ್ಟಿಫಿಕೆಟ್ ಮಂಜೂರುಗೊಳಿಸಿ, ಆಧಾರ್ ಕೇಂದ್ರ ಸ್ಥಾಪಿಸಿ ಎಂದು ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಮಂಗಳವಾರ ನಗರದ ಕಂಕನಾಡಿಯ ಕಾರ್ಮಿಕ ಭವಿಷ್ಯನಿಧಿ ಕಚೇರಿ ಮುಂದೆ ಹಕ್ಕೊತ್ತಾಯ ಚಳವಳಿ ನಡೆಯಿತು.

ಈ ಸಂದರ್ಭ ಮಾತನಾಡಿದ ಎಐಟಿಯುಸಿ ನೇತೃತ್ವದ ಎಸ್‌ಕೆ ಬೀಡಿ ವರ್ಕರ್ಸ್‌ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ವಿ.ಎಸ್. ಬೇರಿಂಜ ಕೊರೋನ ಎಂಬುದು ಕಾರ್ಮಿಕರನ್ನು ಹೆದರಿಸುವ ತಂತ್ರವಾಗಿದೆ. ಅಂದರೆ ಕೊರೋನ-ಲಾಕ್‌ಡೌನ್ ಮಧ್ಯೆ ಜನರನ್ನು ಕತ್ತಲಲ್ಲಿರಿಸಿದ್ದಲ್ಲದೆ ಪಾರ್ಲಿಮೆಂಟ್‌ನಲ್ಲಿ ವಿರೋಧ ಪಕ್ಷದ ಸಂಸದರನ್ನು ಅಮಾನತುಮಾಡಿಸಿ ರೈತ-ದಲಿತ-ಕಾರ್ಮಿಕ ವಿರೋಧಿ ಮಸೂದೆಗಳನ್ನು ಕೇಂದ್ರ ಸರಕಾರ ಬಂಡವಾಳ ಶಾಹಿಗಳ ಪರ ತಿದ್ದುಪಡಿ ಮಾಡಿ ಅಂಗೀಕರಿಸಿ ಏಕಾಧಿಪತ್ಯ ಮೆರೆಯಿತು ಎಂದು ಆಪಾದಿಸಿದರು.

ಎಐಟಿಯುಸಿ ದ.ಕ. ಜಿಲ್ಲಾ ಕಾರ್ಯದರ್ಶಿ ಹೆಚ್.ವಿ. ರಾವ್, ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ದ.ಕ. ಜಿಲ್ಲಾ ಉಪಾಧ್ಯಕ್ಷ ಬಿ. ಶೇಖರ್ ಮಾತನಾಡಿದರು.

ಚಳವಳಿಯ ನೇತೃತ್ವವನ್ನು ಎಐಟಿಯುಸಿ ನಾಯಕರಾದ ಸರಸ್ವತಿ ಕಡೇಶಿವಾಲಯ, ಬಾಬು ಭಂಡಾರಿ, ರ್ಹತ್ ಬಂಟ್ವಾಳ್, ಸುಲೋಚನಾ ಕವತ್ತಾರು, ಸರೋಜಿನಿ ಕೂರಿಯಾಳ, ಬೀಡಿ ಗುತ್ತಿಗೆದಾರರ ಸಂಘಟನೆಯ ಕೃಷ್ಣಪ್ಪಕುಂಪಲ, ಲಕ್ಮಣ ಕುಂಪನಮಜಲು, ಅನಿಲ್ ಕುಮಾರ್ ಕೊಲೆಕಾಡಿ, ಎಐವೈಎಫ್ ನಾಯಕರಾದ ಜಗತ್‌ಪಾಲ್ ಕೋಡಿಕಲ್,ದಿನೇಶ್ ಬಂಟ್ವಾಳ್, ಶ್ರೀನಿವಾಸ್ ಭಂಡಾರಿ, ಪ್ರೇಮನಾಥ್, ಎನ್‌ಎಫ್‌ಐಡಬ್ಲು ರಾಜ್ಯ ಕಾರ್ಯದರ್ಶಿ ಭಾರತ ಪ್ರಶಾಂತ್ ವಹಿಸಿದ್ದರು.

ಎಐಟಿಯುಸಿ ದ.ಕ. ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿದರು. ಎಂ. ಕರುಣಾಕರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News