ವಿಶೇಷ ಚೇತನರನ್ನು ಅನುಕಂಪದ ಬದಲು ಸಮಾನತೆಯಿಂದ ಕಾಣಿರಿ: ಸಿ.ಎ.ಶಾಂತಾರಾಮ ಶೆಟ್ಟಿ

Update: 2020-12-03 08:56 GMT

ಮಂಗಳೂರು, ಡಿ.3: ವಿಶೇಷ ಚೇತನರಿಗೆ ಪ್ರೋತ್ಸಾಹ ನೀಡುವ ಮೂಲಕ ಅವರನ್ನು ಸಮಾಜದ ಮುಂಚೂಣಿಗೆ ತರುವ ಪ್ರಯತ್ನವನ್ನು ಸಮಾಜದ ಪ್ರತಿಯೊಬ್ಬರೂ ಮಾಡಬೇಕು ಎಂದು ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎ.ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.

 ಸಮದೃಷ್ಟಿ ಕ್ಷಮತಾ ವಿಕಾಸ ಮತ್ತು ಅನುಸಂಧಾನ ಮಂದಲ( ಸಕ್ಷಮ) ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು ವತಿಯಿಂದ ನಗರದ ವಿ.ಟಿ.ರೋಡ್ ನಲ್ಲಿರುವ ಚೇತನ ಬಾಲ ವಿಕಾಸ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ  ವಿಶ್ವ ವಿಶಿಷ್ಟ ಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿಶೇಷ ಚೇತನರ ಬಗ್ಗೆ ಅನುಕಂಪ ತೋರುವ ಬದಲು ಅವರನ್ನು ಸಮಾನತೆಯಿಂದ ಕಾಣಬೇಕು. ಧೈರ್ಯ ತುಂಬುವ ಮೂಲಕ ಸಾಧನೆಗೆ ಪ್ರೋತ್ಸಾಹ ನೀಡಬೇಕು. ವಿಶಿಷ್ಟ ಚೇತನರಿಗೆ ಅಗತ್ಯ ಸಹಕಾರವನ್ನು ನೀಡಲು ರೆಡ್ ಕ್ರಾಸ್  ಸದಾ ಬದ್ಧವಾಗಿದೆ ಎಂದವರು ಹೇಳಿದರು.

ಇದೇ ಸಂದರ್ಭ ವಿಶಿಷ್ಟ ಚೇತನರಾಗಿದ್ದು ಸಾಧನೆಗೈದ ಜಯಪ್ರಕಾಶ್, ಕಸ್ತೂರಿ ಗಣೇಶ್ ಆಚಾರ್ಯ ಮತ್ತು ಗೀತಾ ಅವಿನಾಶ್ ಇವರನ್ನು ಸನ್ಮಾನಿಸಲಾಯಿತು.

ಸಕ್ಷಮ ಘಟಕದ ಅಧ್ಯಕ್ಷ ಡಾ.ಮುರಳೀಧರ ನಾಯ್ಕ್  ಅಧ್ಯಕ್ಷತೆ ವಹಿಸಿದ್ದರು.

ರೆಡ್ ಕ್ರಾಸ್ ಘಟಕದ ದಿವ್ಯಾಂಗ ಕೋಶದ ಚೇರ್ ಮನ್ ಡಾ.ಕೆ.ಆರ್.ಕಾಮತ್, ಸಕ್ಷಮದ ಉಪಾಧ್ಯಕ್ಷ ವಿನೋದ್ ಶೆಣೈ, ಕಾರ್ಯದರ್ಶಿ ಹರೀಶ್ ಪ್ರಭು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News