ದುರಂತಕ್ಕೀಡಾದ ಬೋಟ್ ಮೇಲೆತ್ತಲು ಬಾರ್ಜ್ ಬಳಕೆ: ಸಚಿವ ಕೋಟ ಸೂಚನೆ

Update: 2020-12-03 09:28 GMT

ಮಂಗಳೂರು, ಡಿ.3: ದುರಂತಕ್ಕೀಡಾಗಿರುವ ಪರ್ಸಿನ್ ಬೋಟ್ ಮೇಲೆತ್ತಲು ಸೋಮೇಶ್ವರದಲ್ಲಿ ಎಡಿಬಿ ಕಾಮಗಾರಿಗೆ ತಂದಿರುವ ಬಾರ್ಜ್ ಹಾಗೂ ಕ್ರೇನ್ ಅನ್ನು ಸ್ಥಳಕ್ಕೆ ತರಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಬೋಟ್ ಜೊತೆ ಸಮುದ್ರಪಾಲಾಗಿ ಕಾಣೆಯಾಗಿದ್ದ ಆರು ಮಂದಿಯ ಪೈಕಿ ಐವರ ಮೃತದೇಹಗಳು ಪತ್ತೆಯಾಗಿವೆ. ಮುಹಮ್ಮದ್ ಅನ್ಸಾರ್ ಮುಸ್ತಫ ಎಂಬವರು ಇನ್ನೂ ಪತ್ತೆಯಾಗಿಲ್ಲ. ಅವರು ಬೋಟಿನ ಅಡಿಯಲ್ಲಿ ಸಿಲುಕಿರುವ ಬಗ್ಗೆ ಮೀನುಗಾರರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮೇಶ್ವರದಲ್ಲಿ ಎಡಿಬಿ ಕಾಮಗಾರಿಗೆ ತಂದಿರುವ ಬಾರ್ಜ್ ಹಾಗೂ ಕ್ರೇನ್ ಅನ್ನು ಸ್ಥಳಕ್ಕೆ ತರಿಸಿ ಬೋಟ್ ಮೇಲಕ್ಕೆತ್ತುವ ಬಗ್ಗೆ ಸಚಿವ ಕೋಟ ಅವರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಅದರಂತೆ ತತ್ ಕ್ಷಣವೇ ಈ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News