×
Ad

ಕೆಜಿಎನ್ ಪಿಯು ಕಾಲೇಜಿನಲ್ಲಿ 'ಪ್ರೊಡೆನ್ಶಿಯಾ' ವಿಜ್ಞಾನ ವಸ್ತು ಪ್ರದರ್ಶನ

Update: 2020-12-03 16:57 IST

ಬಂಟ್ವಾಳ: ಕೆ.ಜಿ.ಎನ್ ಪದವಿ ಪೂರ್ವ ಕಾಲೇಜು ಮಿತ್ತೂರಿನಲ್ಲಿ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ 'ಪ್ರೊಡೆನ್ಶಿಯಾ' ಆದಿತ್ಯವಾರ ಕೆಜಿಎನ್ ಅಡಿಟೋರಿಯಂ‌ನಲ್ಲಿ ನಡೆಯಿತು.

ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮದಲ್ಲಿ ದುಆಗೈದರು. ಕೆಸಿಎಫ್ ಅಂತರಾಷ್ಟ್ರೀಯ ಅಧ್ಯಕ್ಷ ಶೈಖ್ ಬಾವ ಉದ್ಘಾಟಿಸಿದರು. ಇಬ್ರಾಹಿಂ ಫೈಝಿ ಕನ್ಯಾನ, ಮಾಜಿ ಶಾಸಕ ಮೊಯ್ದೀನ್ ಬಾವ, ಉದ್ಯಮಿ ಮುಸ್ತಫ ಬಸ್ತಿಕೊಡಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಉಪನ್ಯಾಸಕ ಆನಂದ.ಪಿ ಶುಭ ಹಾರೈಸಿದರು.

ವಿಜ್ಞಾನ ವಿಭಾಗದ ಮುಖ್ಯಸ್ಥ ಮುಹಮ್ಮದ್ ಇಸ್ತಿಖಾರ್ ಮುಡಿಪು ಪ್ರಸ್ತಾವಿಸಿದರು. ಸಂಸ್ಥೆಯ ಉಪನ್ಯಾಸಕ ಎ.ಕೆ ನಂದಾವರ ಸ್ವಾಗತಿಸಿ, ಪ್ರಾಂಶುಪಾಲ ಮುಹಮ್ಮದ್ ರಿಝ್ವಾನ್ ವಂದಿಸಿದರು. ಅಬ್ದುರ್ರಹ್ಮಾನ್ ಮುಈನಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News