×
Ad

ಉಡುಪಿ : ಮಾಸ್ಕ್ ಧರಿಸದವರಿಂದ 16,500 ರೂ.ದಂಡ ವಸೂಲಿ

Update: 2020-12-03 17:44 IST

ಉಡುಪಿ, ಡಿ.3: ಕೋವಿಡ್-19 ನಿಯಂತ್ರಣಕ್ಕೆ ಸರಕಾರ ವಿಧಿಸಿದ ಮಾರ್ಗಸೂಚಿಗಳಂತೆ ಮಾಸ್ಕ್ ಧರಿಸದೇ ನಿರ್ಲಕ್ಷ ತೋರಿದ, ಸುರಕ್ಷಿತಾ ಅಂತರ ಕಾಪಾಡದವರ ವಿರುದ್ಧ ಜಿಲ್ಲಾಡಳಿತದ ವತಿಯಿಂದ ಡಿ.2ರಂದು ಒಟ್ಟು 16,500ರೂ. ದಂಡವನ್ನು ವಸೂಲಿ ಮಾಡಲಾಗಿದೆ.

ಜಿಲ್ಲೆಯ ನಗರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 73 ಮಂದಿಯಿಂದ 7,300ರೂ., ಜಿಲ್ಲೆಯ ಏಳು ತಾಲೂಕುಗಳ ಗ್ರಾಪಂ ವ್ಯಾಪ್ತಿ ಯಲ್ಲಿ 28 ಮಂದಿಯಿಂದ 2800ರೂ., ಪೊಲೀಸ್ ಇಲಾಖೆಯ ಮೂಲಕ 46 ಮಂದಿಯಿಂದ 4,600ರೂ., ಅಬಕಾರಿ ಇಲಾಖೆಯಿಂದ 11 ಮಂದಿಯಿಂದ 1,100ರೂ. ಕಂದಾಯ ಇಲಾಖೆಯಿಂದ ಏಳು ಮಂದಿಯಿಂದ 700ರೂ. ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 165 ಮಂದಿಯಿಂದ 16,500ರೂ. ದಂಡ ವಸೂಲಿ ಮಾಡಲಾಗಿದೆ.

ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ 16,267 ಮಂದಿಯಿಂದ 17,85,350 ರೂ. ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News