ಡಿ.6ರಿಂದ 13ರವರೆಗೆ ಜಿಲ್ಲಾ ಮಟ್ಟದ ತುಳು ಭಜನಾ ಸ್ಪರ್ಧೆ ತಂಬೂರಿ-2020

Update: 2020-12-03 13:24 GMT

ಉಳ್ಳಾಲ, ಡಿ.3: ಸೋಮೇಶ್ವರ ಗ್ರಾಮದ ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಆಶ್ರಯದಲ್ಲಿ ದ.ಕ. ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ತುಳು ಭಜನಾ ಸ್ಪರ್ಧೆ ‘ತಂಬೂರಿ-2020’ ಡಿ.6 ಹಾಗೂ 13ರಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆಯಲಿದ್ದು, ಪುರುಷರ ವಿಭಾಗದ ಸ್ಪರ್ಧೆ ಡಿ.6ಕ್ಕೆ ನಡೆಯಲಿದ್ದು, ಮಹಿಳೆಯರು, ಬಾಲಕರು ಹಾಗೂ ಬಾಲಕಿಯರ ವಿಭಾಗದ ಸ್ಪರ್ಧೆ ಡಿ.13ರಂದು ನಡೆಯಲಿದೆ. ಮೂರು ವಿಭಾಗಗಳಿಗೂ ಪ್ರಶಸ್ತಿ ವಿತರಣೆ ಸಮಾರಂಭ ಡಿ.13ರಂದು ಸಂಜೆ 6ಕ್ಕೆ ನಡೆಯಲಿದೆ. ಮೂರೂ ವಿಭಾಗಕ್ಕೂ ಪ್ರಥಮ, ದ್ವಿತೀಯ, ತೃತೀಯ ನಗದು ಹಾಗೂ ಫಲಕ, ಪ್ರಶಸ್ತಿ ಪತ್ರ ಸೇರಿದಂತೆ ಭಾಗವಹಿಸಿದ ಎಲ್ಲ ತಂಡಗಳಿಗೂ ಸ್ಮರಣಿಕೆ, ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು. ವೈಯಕ್ತಿಕವಾಗಿ ಹಾರ್ಮೋನಿಯಂ ವಾದಕ, ತಬಲಾ ವಾದಕ ಹಾಗೂ ಉತ್ತಮ ಭಜಕ ಪ್ರಶಸ್ತಿ ನೀಡಲಾಗುವುದು ಎಂದರು.

ಡಿ.6ರಂದು ಬೆಳಗ್ಗೆ 8:30ಕ್ಕೆ ಕುಂಪಲ ಶಾಲಾ ಮೈದಾನದಿಂದ ಭಜಕರ ವರ್ಣರಂಜಿತ ಶೋಭಾ ಯಾತ್ರೆ ನಡೆಯಲಿದೆ.

ತಂಬೂರಿ-2020ನ್ನು ಡಿ.6ರಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸುವರು. ಡಿ. 13ರ ಮಹಿಳಾ ಮತ್ತು ಮಕ್ಕಳ ಭಜನಾ ಸ್ಪರ್ಧೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು.

ಸುದ್ದಿಗೋಷ್ಠಿಯಲ್ಲಿ ಮಂದಿರದ ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಉಪಾಧ್ಯಕ್ಷ ಚಂದ್ರಶೇಖರ್ ಬಿ.ಜೆ., ಆಡಳಿ ಮಂಡಳಿ ಸದಸ್ಯರಾದ ಗಣೇಶ್ ಅಂಚನ್, ಜಗದೀಶ್ ಆಚಾರ್ಯ, ಕಿಶೋರ್ ಡಿ.ಕೆ. ಹಾಗೂ ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್. ಕುಂಪಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News