×
Ad

ಶ್ರೀಕೃಷ್ಣ ಮಠದ ಮುಖದ್ವಾರದಲ್ಲಿ ಕನ್ನಡ ನಾಮಫಲಕ ಆಳವಡಿಕೆ

Update: 2020-12-03 18:59 IST

ಉಡುಪಿ, ಡಿ.3: ಉಡುಪಿ ಶ್ರೀಕೃಷ್ಣ ಮಠದ ಮುಖದ್ವಾರದ ಕನ್ನಡ ನಾಮ ಫಲಕದ ವಿವಾದದ ಹಿನ್ನೆಲೆಯಲ್ಲಿ ಗುರುವಾರ ಮಠದ ಎದುರು ಕನ್ನಡ ನಾವು ಫಲಕವನ್ನು ಆಳವಡಿಸಲಾಗಿದೆ.

ಮುಖದ್ವಾರದಲ್ಲಿದ್ದ ಶ್ರೀಕೃಷ್ಣ ಮಠ ಎಂಬುದಾಗಿ ಬರೆಯಲಾದ ಕನ್ನಡ ನಾಮ ಫಲಕವನ್ನು ತೆಗೆದು, ‘ಶ್ರೀಕೃಷ್ಣ ಮಠ ರಜತಪೀಠ ಪುರ’ ಎಂದು ತುಳು ಹಾಗೂ ಸಂಸ್ಕೃತ ಭಾಷೆಯ ನಾಮಫಲಕವನ್ನು ಮಾತ್ರ ಹಾಕಲಾಗಿತ್ತು. ಇದಕ್ಕೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಸಾಕಷ್ಟು ಪರ ಹಾಗೂ ವಿರೊೀಧ ಚರ್ಚೆಗಳು ಕೂಡ ನಡೆದಿತ್ತು.
ಇದೀಗ ಮಠದ ಎದುರಿನ ಮಂಟಪಕ್ಕೆ ‘ವಿಶ್ವಗುರು ಶ್ರೀಮನ್ಮಧ್ವಾಚಾರ್ಯ ಮೂಲ ಸಂಸ್ಥಾನ, ಶ್ರೀಕೃಷ್ಣ ಮಠ, ಉಡುಪಿ’ ಎಂದು ಮರದಲ್ಲಿ ಬರೆದ ನಾಮ ಫಲಕವನ್ನು ಹಾಕಲಾಗಿದೆ. ಈ ಮೂಲಕ ವಿವಾದಕ್ಕೆ ತೆರೆ ಎರೆಯಲಾಗಿದೆ.

ತುಳುನಾಡಿನ ಜನ ಕನ್ನಡವನ್ನು ಉಳಿಸುವ ಕೆಲಸವನ್ನು ಸ್ವಯಂಪ್ರೇರಣೆ ಯಿಂದ ಮಾಡುತ್ತಿದ್ದಾರೆ. ದಾಸ ಪರಂಪರೆ ಕೂಡ ಇದಕ್ಕೆ ಮಹತ್ವ ಕೊಡುಗೆ ನೀಡಿದೆ. ರಾಜಾಂಗಣದಲ್ಲಿ ನಡೆಯುವ ಶೇ.99ರಷ್ಟು ಕಾರ್ಯಕ್ರಮ ಕನ್ನಡ ದಲ್ಲೇ ನಡೆಯುತ್ತಿದೆ ಎಂದು ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಇಂದು ರಥಬೀದಿಯಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ನಾಮಫಲಕ ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News