ನೇಣುಬಿಗಿದು ಆತ್ಮಹತ್ಯೆ

Update: 2020-12-03 15:44 GMT

ಹೆಬ್ರಿ, ಡಿ.3: ವಿಪರೀತ ಮದ್ಯಪಾನದ ಚಟದೊಂದಿಗೆ ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ಮನೆಯ ಹಾಲ್‌ನಲ್ಲಿ ಕುತ್ತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಡ್ಪಾಲು ಗ್ರಾಮದ ಸೀತಾನದಿಯಿಂದ ವರದಿಯಾಗಿದೆ.

ಚಾಲಕ ವೃತ್ತಿ ಮಾಡಿಕೊಂಡಿದ್ದ ಜೋಸೆಫ್ ಮಸ್ಕರೇನಸ್ (54) ಇವರೇ ಆತ್ಮಹತ್ಯೆ ಮಾಡಿಕೊಂಡವರು. ಇವರು ನಿನ್ನೆ ಅಪರಾಹ್ನ 2 ರಿಂದ 4  ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಹಾಲ್‌ನಲ್ಲಿ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News