ಉತ್ಖನನದಿಂದ ಕನಕದಾಸ ಹುಟ್ಟೂರು ಬಾಡಾ ಅಭಿವೃದ್ಧಿ: ಡಾ.ಸಾಮಕ್

Update: 2020-12-03 15:48 GMT

ಉಡುಪಿ, ಡಿ.3: ಕನಕದಾಸ ಹುಟ್ಟೂರು ಹಾವೇರಿ ಜಿಲ್ಲೆಯ ಬಾಡಾದಲ್ಲಿ ಉತ್ಖನನ ನಡೆಸಿದ ಪರಿಣಾಮ ಸಾಕಷ್ಟು ಅಭಿವೃದ್ಧಿಯಾಗಿದ್ದು, ಕನಕದಾಸರು ಹುಟ್ಟಿ ಬೆಳೆದ ಮನೆ, ಅಡುಗೆ ಕೋಣೆ, ಪ್ರವೇಶದ್ವಾರ ಇತ್ತು ಎಂಬುಕ್ಕೆ ನಿರ್ದಿಷ್ಟ ಪುರಾವೆಗಳು ದೊರೆತಿವೆ ಶಿವಮೊಗ್ಗದ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರಜ್ಞ ಡಾ.ಎಸ್.ಜಿ.ಸಾಮಕ್ ಹೇಳಿದ್ದಾರೆ.

ಕನಕದಾಸ ಅಧ್ಯಯನ ಸಂಶೋಧನ ಪೀಠ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ‘ಬಾಡಾ ಉತ್ಖನನದ್ಲಿ ಕಂಡುಬಂದ ಕನಕದಾಸರ ನೆಲೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲ ಪ್ರೊ.ಮೇಟಿ ಮುದಿಯಪ್ಪ ಮಾತನಾಡಿದರು. ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜಿನ ಪ್ರಾಂಶುಪಾ ಡಾ. ದೇವಿದಾಸ್ ಎಸ್.ನಾಯ್ಕಾ ವಹಿಸಿದ್ದರು.

ಸಂಶೋಧನ ಪೀಠದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಪ್ರಾಸ್ತಾವಿಕ ವಾಗಿ ಮಾತನಾಡಿ ಸ್ವಾಗತಿಸಿದರು. ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ವಂದಿಸಿದರು. ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ದಿವ್ಯಶ್ರೀ ಮಣಿಪಾಲ ಅವರಿಂದ ಕನಕ ಗೀತೆಗಳನ್ನು ಹಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News