ಕ್ಯಾಂಪಸ್ ಟಾಪರ್ ಸಮತಾ ಹೆಗ್ಡೆಗೆ ಚಿನ್ನದ ಪದಕ

Update: 2020-12-03 17:31 GMT

ಭಟ್ಕಳ : ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ (ಜಿ.ಕೆ.ವಿ.ಕೆ.ಹೆಬ್ಬಾಳ) ಎಂ.ಎಸ್ಸಿ. (ಕೀಟ ಶಾಸ್ತ್ರ) ವಿಭಾಗದಲ್ಲಿ ಮುರ್ಡೇಶ್ವರದ ಸಮತಾ ಹೆಗ್ಡೆ ಕ್ಯಾಂಪಸ್ ಟಾಪರ್ ಆಗಿ ಚಿನ್ನದ ಪದವನ್ನು ತನ್ನದಾಗಿಸಿಕೊಂಡಿದ್ದಾರೆ.

ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ಇಲ್ಲಿನ ಆನಂದ ಆಶ್ರಮ ಕಾನ್ವೆಂಟ್ ಶಾಲೆಯಲ್ಲಿ ಪೂರೈಸಿದ್ದ ಈಕೆ ಕುಂದಾಪುರದ ಆರ್.ಎನ್.ಎಸ್. ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ. ಮುಗಿಸಿ ಬಿ.ಎಸ್ಸಿ. ಕೃಷಿ ಪದವಿಯನ್ನು ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲದಲ್ಲಿ ಪೂರೈಸಿದ್ದರು. 

ಜಿ.ಕೆ.ವಿ.ಕೆ. ಹೆಬ್ಬಾಳದಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಎಂ.ಎಸ್ಸಿ (ಕೀಟ ಶಾಸ್ತ್ರ)ದಲ್ಲಿ ಟಾಪರ್ ಆಗಿ ಹೊರ ಹೊಮ್ಮಿರುವ ಈಕೆ ಪ್ರಸ್ತುತ ಬೇಯರ್ಸ್ (ಜರ್ಮನಿ) ಕಂಪೆನಿಯಲ್ಲಿ ಕೀಟ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಈಕೆಯು ಮುರ್ಡೇಶ್ವರ ನಿಸರ್ಗ ರೆಸಿಡೆನ್ಸಿಯ ಜಯಾನಂದ ಹೆಗ್ಡೆ ಹಾಗೂ ಶಾಲಿನಿ ಹೆಗ್ಡೆ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News