ಯುಎಇ 49ನೇ ರಾಷ್ಟ್ರೀಯ ದಿನ : ಫೇಸ್ ಬುಕ್ ಯುಟ್ಯೂಬ್ ಲೈವ್ ಕಾರ್ಯಕ್ರಮ ನಡೆಸಿದ ಕೆ.ಎಸ್.ಸಿ.ಸಿ

Update: 2020-12-03 17:38 GMT

ರಿಯಾದ್ : ಯುಎಇಯ 49ನೇ ರಾಷ್ಟ್ರೀಯ ದಿನದ ಅಂಗವಾಗಿ ಕೆಎಸ್ ಸಿಸಿ  ಸಂಘಟನೆ ತನ್ನ ಫೇಸ್ ಬುಕ್ ಪುಟ ಹಾಗೂ ಯುಟ್ಯೂಬ್ ಚಾನೆಲ್ ನಲ್ಲಿ ಡಿ. 2ರಂದು ಅಪರಾಹ್ನ 3 ಗಂಟೆಗೆ ಲೈವ್ ಕಾರ್ಯಕ್ರಮ ನಡೆಸಿದೆ. ಈ ಬಾರಿಯ ಕಾರ್ಯಕ್ರಮದ ಥೀಮ್ `ಕಲರಿಂಗ್ ದಿ ನೇಷನ್' ಆಗಿತ್ತು.

ಯುಎಇ ರಾಷ್ಟ್ರಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕೆಎಸ್ಸಿಸಿ ಅಧ್ಯಕ್ಷ  ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ವಿವಿಧ ಧರ್ಮ ಸಂಸ್ಕೃತಿಗಳ ಜನರು ಹೇಗೆ ಸೌಹಾರ್ದತೆಯಿಂದ ಬಾಳುತ್ತಿದ್ದಾರೆಂಬುದನ್ನು ಬಿಂಬಿಸುವ `ಯುಎಎ-ಎ ಹೇವನ್ ಆಫ್ ಡೈವರ್ಸಿಟಿ,''ಎಂಬ ವೀಡಿಯೋ ಪ್ರಸ್ತುತ ಪಡಿಸಲಾಯಿತು.

ಎಲೆಮರೆಯ ಕಾಯಿಗಳಂತೆ ಕೋವಿಡ್ ಸಾಂಕ್ರಾಮಿಕ ಸಂದರ್ಭ ನಿಸ್ವಾರ್ಥ ಸೇವೆ ಸಲ್ಲಿಸಿದ `ಅನ್ಸಂಗ್ ಹೀರೋಸ್ ಆಫ್ ಕೋವಿಡ್ 19'  ಅವರನ್ನು  ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಕೋವಿಡ್ ಸಾಂಕ್ರಾಮಿಕ ವೇಳೆ ಸೇವೆ ಸಲ್ಲಿಸಿದ್ದ ಅಂಬ್ಯುಲೆನ್ಸ್ ಚಾಲಕರನ್ನೂ ಸನ್ಮಾನಿಸಲಾಯಿತು. ಯುಎಇಯಲ್ಲಿ ನೆಲೆಸಿರುವ ಹೊರದೇಶದವರ ಬಾಳನ್ನು ಯುಎಇ ನಾಯಕತ್ವ ಹಸನಾಗಿಸುತ್ತಿರುವ ದ್ಯೋತಕವಾಗಿರುವ ವೀಡಿಯೊವೊಂದನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.

ಈ ಬಾರಿಯ ಕಾರ್ಯಕ್ರಮದ `ಕಲರಿಂಗ್ ದಿ ನೇಷನ್' ಥೀಮ್ ಅನುಸಾರವಾಗಿ  ಆನ್ಲೈನ್ ಚಿತ್ರ ಬಿಡಿಸುವ ಸ್ಪರ್ಧೆ ನಡೆಸಲಾಗಿತ್ತು. ಹೀಗೆ ಸ್ಪರ್ಧಾಳುಗಳು ಬಿಡಿಸಿದ ಚಿತ್ರಗಳನ್ನು ಈ ಸಂದರ್ಭ ಪ್ರದರ್ಶಿಸಿ ಅವರಿಗೆ ಪ್ರಶಂಸಾಪತ್ರಗಳನ್ನು ವಿತರಿಸಲಾಯಿತು.

ಕೆಎಸ್ಸಿಸಿಯ ವಿವಿಧ ಸಮಾಜ ಸೇವಾ ಕಾರ್ಯಗಳಾದ ಆಹಾರ ಕಿಟ್ ವಿತರಣೆ, ರಕ್ತದಾನ, ಕೋವಿಡ್ ಸಾಂಕ್ರಾಮಿಕ ವೇಳೆ ಕಷ್ಟದಲ್ಲಿದ್ದವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕಳುಹಿಸಲು ನೆರವು, ಇಫ್ತಾರ್ ಕಿಟ್ ವಿತರಣೆ ಇತ್ಯಾದಿ ಕಾರ್ಯಕ್ರಮಗಳ ಕುರಿತಾದ  ಮಾಹಿತಿಯನ್ನೂ  ಈ ಕಾರ್ಯಕ್ರಮದ ವೇಳೆ ಒದಗಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News