ಕುಟುಂಬ ಸದಸ್ಯರಿಗೆ ಮುಂಚಿತ ಕ್ಷಮಾದಾನ ನೀಡಲು ಟ್ರಂಪ್ ಚಿಂತನೆ?

Update: 2020-12-03 17:57 GMT

ವಾಶಿಂಗ್ಟನ್, ಡಿ. 3: ತನ್ನ ಮೂವರು ಮಕ್ಕಳು, ಅಳಿಯ ಮತ್ತು ವಕೀಲನಿಗೆ ಮುಂಚಿತ ಕ್ಷಮಾದಾನ ನೀಡುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಮತ್ತು ಅಮೆರಿಕದ ಇತರ ಮಾಧ್ಯಮಗಳು ವರದಿ ಮಾಡಿವೆ.

 ನಿಯೋಜಿತ ಅಧ್ಯಕ್ಷ ಜೋ ಬೈಡನ್‌ರ ಅಟಾರ್ನಿ ಜನರಲ್ ತನ್ನ ಮಕ್ಕಳಾದ ಡೊನಾಲ್ಡ್ ಟ್ರಂಪ್ ಜೂನಿಯರ್, ಎರಿಕ್ ಟ್ರಂಪ್ ಮತ್ತು ಇವಾಂಕಾ ಟ್ರಂಪ್, ಇವಾಂಕಾರ ಗಂಡ ಜ್ಯಾರೆಡ್ ಕಶ್ನರ್ ಮತ್ತು ವಕೀಲ ರೂಡಿ ಗಿಯುಲಿಯಾನಿಗೆ ಕಿರುಕುಳ ನೀಡಬಹುದು ಎಂಬ ಆತಂಕವನ್ನು ಟ್ರಂಪ್ ಹೊಂದಿದ್ದಾರೆ ಎನ್ನಲಾಗಿದೆ. ಹಾಗಾಗಿ, ಅವರಿಗೆ ಮುಂಚಿತವಾಗಿಯೇ ಕ್ಷಮಾದಾನ ನೀಡುವ ಬಗ್ಗೆ ತನ್ನ ಸಲಹೆಗಾರರೊಂದಿಗೆ ಟ್ರಂಪ್ ಚರ್ಚಿಸಿದ್ದಾರೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕದ ಕಾನೂನಿನ ಪ್ರಕಾರ, ಅವರಿಗೆ ಮುಂಚಿತ ಕ್ಷಮಾದಾನ ಲಭಿಸಿದರೆ ಮುಂದೆ ಅವರ ವಿರುದ್ಧ ದೋಷಾರೋಪ ಹೊರಿಸಲು ಸಾಧ್ಯವಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News