ಕುಂದಾಪುರ : ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

Update: 2020-12-04 06:59 GMT

ಕುಂದಾಪುರ, ಡಿ.3: ಕಂದಾವರ ಗ್ರಾಮದ ಹೇರಿಕೆರೆ ಎಂಬಲ್ಲಿ ಬಾವಿಗೆ ಬಿದ್ದ ಜಿಂಕೆಯನ್ನು ಕುಂದಾಪುರ ವಲಯ ಅರಣ್ಯ ಇಲಾಖೆಯವರು ಇಂದು ಬೆಳಗ್ಗೆ ರಕ್ಷಿಸಿದ್ದಾರೆ.

ರಾತ್ರಿ ವೇಳೆ ಎರಡು ವರ್ಷ ಪ್ರಾಯದ ಗಂಡು ಜಿಂಕೆಯೊಂದು ಅಕಸ್ಮಿಕ ವಾಗಿ ಹೇರಿಕೆರೆಯ ರಾಜೇಂದ್ರ ಎಂಬವರ ಮನೆ ಎದುರು ಇರುವ 20 ಅಡಿ ಆಳದ ಬಾವಿಗೆ ಬಿತ್ತೆನ್ನಲಾಗಿದೆ. ಇಂದು ಬೆಳಗ್ಗೆ 7ಗಂಟೆ ಸುಮಾರಿಗೆ ಇದನ್ನು ಗಮನಿಸಿದ ಮನೆಯವರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳೀಯರ ಸಹಕಾರ ದೊಂದಿಗೆ ಬೆಳಗ್ಗೆ 8 ಗಂಟೆ ಸುಮಾರಿಗೆ ಬಲೆ ಹಾಕಿ ಜಿಂಕೆಯನ್ನು ಮೇಲಕ್ಕೆತ್ತಿ ದ್ದಾರೆ. ಜಿಂಕೆಗೆ ಯಾವುದೇ ಗಾಯಗಳಾಗಿಲ್ಲ. ಆರೋಗ್ಯವಾಗಿದೆ. ಬಾವಿಯಿಂದ ಮೇಲಕ್ಕೆತ್ತಿದ ಜಿಂಕೆ ಅಲ್ಲೇ ಅರಣ್ಯದಲ್ಲಿ ಓಡಿ ಸೇರಿಕೊಂಡಿತು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದರು.

ಕುಂದಾಪುರ ಉಪ ವಲಯ ಅರಣ್ಯಾಧಿಕಾರಿ ಉದಯ, ಅರಣ್ಯ ವೀಕ್ಷಕ ಸೋಮಶೇಖರ್, ಅರಣ್ಯ ರಕ್ಷಕ ಉದಯ್, ಚಾಲಕ ಅಶೋಕ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News