ಮಾಜಿ ಮೇಯರ್ ಕೃಷ್ಣಪ್ಪ ಮೆಂಡನ್ ನಿಧನ

Update: 2020-12-04 10:35 GMT

ಮಂಗಳೂರು, ಡಿ. 4: ಹಿರಿಯ ಕಾಂಗೆಸ್ಸಿಗರು, ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಕೆ. ಕೃಷ್ಣಪ್ಪ ಮೆಂಡನ್ (88) ಅವರು ಇಂದು ನಿಧನರಾಗಿದ್ದಾರೆ. 

ಅವರು ತನ್ನ ಸಾಮಾಜಿಕ ಹಾಗೂ ರಾಜಕೀಯ ಸೇವೆಯನ್ನು ಕಂಕನಾಡಿ ವಾರ್ಡಿನ ಪಂಚಾಯತ್ ಸದಸ್ಯರಾಗಿ ಆರಂಭಿಸಿದ್ದರು. 1983 ರಿಂದ ಮಂಗಳೂರು ಮಹಾನಗರಪಾಲಿಕೆ ಅಳಪೆ ವಾರ್ಡಿನಿಂದ ಕಾರ್ಪೊರೇಟರ್ ಆಗಿ ಚುನಾಯಿತರಾಗಿದ್ದರು. ನಾಲ್ಕು ಬಾರಿ ಅವರು ಅಳಪೆ ವಾರ್ಡಿನಿಂದ ಕಾರ್ಪೊರೇಟರ್ ಆಗಿ ಚುನಾಯಿಸಲ್ಪಟ್ಟಿದ್ದಾರೆ. 1993 ರಲ್ಲಿ ಅವರು ಮಂಗಳೂರಿನ ಮೇಯರ್ ಆಗಿ ಸೇವೆ ಸಲ್ಲಿಸಿದ್ದರು. ಅದಲ್ಲದೆ, ದ. ಕ. ಜಿಲ್ಲಾ ಗಾಣಿಗರ ಹಾಗೂ ಸಪಲಿಗರ ಸಂಘ ಹಾಗೂ ಕರಾವಳಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಯ ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿರುತ್ತಾರೆ. ಅತ್ತಾವರದ ಶ್ರೀ ಉಮಮಹೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿರುತ್ತಾರೆ.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕೃಷ್ಣಪ್ಪ ಮೆಂಡನ್ ಅವರ ನಿಧನಕ್ಕೆ ಮಾಜಿ ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ, ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡಿಸ್, ಮಾಜಿ ಉಸ್ತುವಾರಿ ಸಚಿವರಾದ ಯು. ಟಿ. ಖಾದರ್, ರಮಾನಾಥ ರೈ, ಮಾಜಿ ಶಾಸಕರಾದ ಜೆ. ಆರ್. ಲೋಬೊ, ಮೊಯ್ದಿನ್ ಬಾವ, ಐವನ್ ಡಿಸೋಜಾ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮೊದಲಾದವರು ಸಂತಾಪ ವ್ಯಕ್ತಪಡಿ ಸಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News