ಮೊದಲ ಟ್ವೆಂಟಿ-20: ಆಸ್ಟ್ರೇಲಿಯಕ್ಕೆ 162 ರನ್ ಗುರಿ ನೀಡಿದ ಭಾರತ

Update: 2020-12-04 10:43 GMT

ಕ್ಯಾನ್ ಬೆರಾ: ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಅರ್ಧ ಶತಕ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜ ಅವರ ಮಿಂಚಿನ ಬ್ಯಾಟಿಂಗ್ ನೆರವಿನಿಂದ ಭಾರತವು ಶುಕ್ರವಾರ ಇಲ್ಲಿ ನಡೆದ ಮೊದಲ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯದ ಗೆಲುವಿಗೆ 162 ರನ್ ಗುರಿ ನೀಡಿದೆ.

ಟಾಸ್ ಜಯಿಸಿದ ಆಸ್ಟ್ರೇಲಿಯ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಭಾರತವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 161 ರನ್ ಗಳಿಸಿತು.

ರಾಹುಲ್ ಸರ್ವಾಧಿಕ ಸ್ಕೋರ್ (51, 40 ಎಸೆತ, 5 ಬೌಂಡರಿ, 1 ಸಿಕ್ಸರ್)ಗಳಿಸಿದರು. 23 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ಗಳ ಸಹಿತ ಔಟಾಗದೆ 44 ರನ್  ಸಿಡಿಸಿದ ಜಡೇಜ ಹಾಗೂ ಸ್ಯಾಮ್ಸನ್ (23, 15 ಎಸೆತ, 1 ಬೌಂಡರಿ, 1 ಸಿಕ್ಸರ್) ತಂಡದ ಸ್ಕೋರನ್ನು 161ಕ್ಕೆ ತಲುಪಿಸಿದರು. ಇದೇ ವೇಳೆ ಚೆಂಡು ಜಡೇಜರ ಹೆಲ್ಮೆಟ್ ಗೆ ಅಪ್ಪಳಿಸಿದ ಘಟನೆಯೂ ನಡೆದಿದೆ. ಬಿಸಿಸಿಐ ವೈದ್ಯಕೀಯ ತಂಡವು ಜಡೇಜರನ್ನು ತಪಾಸಣೆ ನಡೆಸುತ್ತಿದೆ.

ಆಸ್ಟ್ರೇಲಿಯದ ಪರವಾಗಿ ಹೆನ್ರಿಕ್ಸ್ (3-22) ಹಾಗೂ ಸ್ಟಾರ್ಕ್ (2-34) ಐದುವಿಕೆಟ್ ಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News