ಬ್ಯಾರಿ ಅಕಾಡಮಿ ಪುರಸ್ಕಾರಕ್ಕೆ ಮುಳುಗು ತಜ್ಞ ಮುಹಮ್ಮದ್ ಆಯ್ಕೆ

Update: 2020-12-04 11:49 GMT

ಉಪ್ಪಿನಂಗಡಿ : ಮುಳುಗುತಜ್ಞರಾಗಿ ನದಿ ನೀರಿನಲ್ಲಿ ಅಪಾಯದಲ್ಲಿ ಸಿಲುಕಿದ ಜೀವಗಳನ್ನು ರಕ್ಷಣೆ ಮಾಡಿರುವ ಬಂದಾರು ಗ್ರಾಮದ ವಿ. ಮುಹಮ್ಮದ್ ಓಟೆಚ್ಚಾರು ಅವರನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ತನ್ನ ಈ ವರ್ಷದ ರಾಜ್ಯಮಟ್ಟದ ಗೌರವ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.

ಡಿ.10ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿಯವರು ಮುಹಮ್ಮದ್ ಓಟೆಚ್ಚಾರು ಅವರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ.

ಅತ್ಯುತ್ತಮ ಈಜುಪಟುವಾಗಿರುವ ಮುಹಮ್ಮದ್ ಅವರು ಈಗಾಗಲೇ ನದಿ ನೀರಿನಲ್ಲಿ ಅಪಾಯದಲ್ಲಿ ಸಿಲುಕಿದವರ ರಕ್ಷಣೆ, ಆಳವಾದ ನದಿಯ ಗಯ, ಕೆರೆಗಳಲ್ಲಿ ಮುಳುಗಿ ಮೃತಪಟ್ಟವರ ಮೃತದೇಹವನ್ನು ಮೇಲಕ್ಕೆತ್ತಿ ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಗೆ ಸಹಕಾರಿಯಾಗಿದ್ದಾರೆ. ನೇತ್ರಾವತಿ ನದಿಯಲ್ಲಿ ಉದ್ಯಮಿ ಸಿದ್ದಾರ್ಥ ಅವರ ಮೃತದೇಹದ ಶೋಧ ಕಾರ್ಯಾಚರಣೆಯಲ್ಲಿ ಕೂಡಾ ಅವರು ತೊಡಗಿಸಿಕೊಂಡಿದ್ದರು. ಖಮರುಲ್ ಉಲಮಾ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೇಖ್ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರಿಂದ ಕಲ್ಲಿಕೋಟೆಯ ನೋಲೇಜ್ ಸಿಟಿಯಲ್ಲಿ ಅವರು `ಜೀವ ರಕ್ಷಕ' ಬಿರುದನ್ನೂ ಪಡೆದಿದ್ದಾರೆ. ಅಲ್ಲದೇ ಹಲವು ಸಂಘ- ಸಂಸ್ಥೆಗಳು ಸನ್ಮಾನ- ಪುರಸ್ಕಾರಕ್ಕೆ ಅವರು ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News