ಮಲ್ಪೆ ಜಮಾಅತೆ ಇಸ್ಲಾಮೀಯಿಂದ ರಕ್ತದಾನ ಶಿಬಿರ

Update: 2020-12-04 14:23 GMT

ಮಲ್ಪೆ, ಡಿ.4: ಪ್ರವಾದಿಯವರ ಜೀವನವೇ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಸ್ಥಾಪನೆಯಾಗಿದೆ. ಪ್ರಸಕ್ತ ದ್ವೇಷ, ಅಸಹಿಷ್ಣುತೆ, ಅನ್ಯಾಯ, ಹಿಂಸೆ ಗಳಿಂದ ಕಲುಷಿತಗೊಳ್ಳುತ್ತಿರುವ ಸಮಾಜದಲ್ಲಿ ಅವರ ನ್ಯಾಯ ಮತ್ತು ಮಾನ ವೀಯತೆಯ ಶಿಕ್ಷಣಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ಆರ್.ಎಂ.ಸಿದ್ದೀಕ್ ಹೇಳಿದ್ದಾರೆ.

ಮಲ್ಪೆಯ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಉಡುಪಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಇತ್ತೀಚೆಗೆ ಮಲ್ಪೆ ಅಬೂಬಕ್ಕರ್ ಸಿದ್ದಿಕ್ ಜಾಮೀಯ ಮಸೀದಿಯ ವಠಾರದಲ್ಲಿ ಆಯೋಜಿಸ ಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೇಣುಗೋಪಾಲ್ ಮಾತನಾಡಿ, ಇಂತಹ ರಕ್ತದಾನ ಶಿಬಿರಗಳು ಬಹು ಪ್ರಾಮುಖ್ಯತೆ ಹೊಂದಿವೆ. ಇಲ್ಲಿಂದ ಈ ಹಿಂದೆಯೂ ರಕ್ತದಾನ ಮಾಡಲಾಗಿದೆ. ಇಂತಹ ಸಮಾಜಮುಖೀ ಕಾರ್ಯಗಳು ವಾ್ಯಪಕವಾ ನಡೆಯಬೇಕಾಗಿದೆ ಎಂದರು.

ಜಮಾಅತ್ ಉಡುಪಿ ಜಿಲ್ಲಾ ಸಂಚಾಲಕ ಶಬ್ಬೀರ್ ಎಂ.ಮಲ್ಪೆ ಉಪಸ್ಥಿತರಿ ದ್ದರು. ಮಲ್ಪೆ ಸ್ಥಾನೀಯ ಜಮಾಅತ್ ಅಧ್ಯಕ್ಷ ಉಸ್ತಾದ್ ರಫೀಕ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News