ಮಂಗಳೂರು-ಬೆಂಗಳೂರಿಗೆ ರಾಜಹಂಸ ಬಸ್ ಸಂಚಾರ ಆರಂಭ

Update: 2020-12-04 15:47 GMT

ಮಂಗಳೂರು, ಡಿ.4: ಮಂಗಳೂರಿನಿಂದ ಬೆಂಗಳೂರಿಗೆ ರಾಜಹಂಸ ಬಸ್ ಸೇವೆಯನ್ನು ಶುಕ್ರವಾರದಿಂದಲೇ ಆರಂಭಿಸಲಾಗಿದೆ.

ಮಂಗಳೂರು ಬಸ್ ನಿಲ್ದಾಣದಿಂದ ಕುಲಶೇಖರ, ವಾಮಂಜೂರು, ಗುರುಪುರ, ಕೈಕಂಬ, ಗಂಜಿಮಠ, ಎಡಪದವು, ಮಿಜಾರು, ತೋಡಾರು, ಬಡಗಬೆಟ್ಟು, ಮೂಡುಬಿದಿರೆ, ವೇಣೂರು, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ, ಕೊಕ್ಕಡ, ಗುಂಡ್ಯ, ಸಕಲೇಶಪುರ, ಹಾಸನ, ಚೆನ್ನರಾಯಪಟ್ಟಣ ಮಾರ್ಗವಾಗಿ ಬೆಂಗಳೂರಿಗೆ ತೆರಳಲಿದೆ.

ಬೆಂಗಳೂರಿನಿಂದ ಇದೇ ಮಾರ್ಗವಾಗಿ ಮಂಗಳೂರಿಗೆ ಸಾರ್ವಜನಿಕರ ಬೇಡಿಕೆಗನುಗುಣವಾಗಿ ರಾಜಹಂಸ ವಾಹನವನ್ನು ಡಿ.4ರಿಂದ ಆರಂಭಿಸಲಾಗಿದೆ.

ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು ಪ್ರಯಾಣಿಕರು ಹತ್ತಿರದ ರಿಸರ್ವೇಶನ್ ಕೌಂಟರ್‌ನ್ನು ಸಂಪರ್ಕಿಸಬಹುದು. ಸಾರಿಗೆಯ ಸದುಪ ಯೋಗವನ್ನು ಪಡೆದುಕೊಳ್ಳುವಂತೆ ಮಂಗಳೂರು ಕರಾರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News