ಭಾರೀ ಸ್ಫೋಟಕಗಳು, ಡಿಟೋನೇಟರ್‌ಗಳು ವಶಕ್ಕೆ: 6 ಮಂದಿ ಬಂಧನ

Update: 2020-12-04 17:51 GMT

ಶಿಲ್ಲಾಂಗ್, ಡಿ. 4: ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಸ್ಫೋಟಕಗಳು ಹಾಗೂ ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.

ಸ್ಫೋಟಕಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು 4 ಕಿಲೋ ಪ್ರದೇಶದಲ್ಲಿ ಬುಧವಾರ ರಾತ್ರಿ ದಾಳಿ ನಡೆಸಿದರು. ಲೇಡ್ರಿಂಬೈ ಪೊಲೀಸ್ ಹೊರ ಠಾಣೆ ಪ್ರದೇಶದ ಕೋಂಗೋಂಗ್‌ನಲ್ಲಿ ಅಸ್ಸಾಂ ನೋಂದಣಿಯ ಎಸ್‌ಯುವಿ ವಾಹನವನ್ನು ತಡೆದು ಶೋಧಿಸಲಾಯಿತು. ಈ ಸಂದರ್ಭ ವಾಹನದಲ್ಲಿ 250 ಕಿ.ಗ್ರಾಂ. ಸ್ಫೋಟಕಗಳು (2000 ಜೆಲೆಟಿನ್ ಕಡ್ಡಿಗಳು), 1000 ಜೀವಂತ ಡಿಟೋನೇಟರ್‌ ಹಾಗೂ 8 ರೋಲ್ ಫ್ಯೂಸ್ ವಯರ್ ಪತ್ತೆಯಾಯಿತು ಎಂದು ಐಜಿಪಿ ಜಿ.ಕೆ. ಲಾಂಗ್ರೈ ತಿಳಿಸಿದ್ದಾರೆ. ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರನ್ನು ಬಂಧಿಸಲಾಯಿತು. ಅವರು ನೀಡಿದ ಮಾಹಿತಿಯ ಆಧಾರದಲ್ಲಿ ಮತ್ತೆ ನಾಲ್ವರನ್ನು ಬಂಧಿಸಲಾಯಿತು ಎಂದು ಲಾಂಗ್ರೈ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News