ಟೆಸ್ಟ್ ಡ್ರೈವ್‌ಗೆ ಹೋದಾತ ಬೈಕ್‌ನೊಂದಿಗೆ ನಾಪತ್ತೆ

Update: 2020-12-04 16:15 GMT

ಮಂಗಳೂರು, ಡಿ. 4: ಬೈಕ್ ಖರೀದಿಗೆ ಬಂದು ಟೆಸ್ಟ್ ಡ್ರೈವ್ ಮಾಡುವುದಾಗಿ ಬೈಕ್‌ನೊಂದಿಗೆ ತೆರಳಿದಾತ ಹಿಂದಿರುಗಿ ಬಾರದೆ ಪರಾರಿಯಾದ ಬಗ್ಗೆ ವರದಿಯಾಗಿದೆ.

ಅಳಕೆಯಲ್ಲಿ ಕನ್ಸಲ್ಟೆಂಟ್ಸ್ ಸಂಸ್ಥೆಯೊಂದರ ಹಳೆ ದ್ವಿಚಕ್ರ ವಾಹನಗಳ ಶೋರೂಂ ಇದ್ದು, ಭೋಜರಾವ್ ಲೇನ್‌ನಲ್ಲಿರುವ ಗೋಡೌನ್‌ನಲ್ಲಿ ಗುರುಪ್ರಸಾದ್ ಎಂಬವರು ಕೆಲಸಕಿದ್ದು, ಅಪರಿಚಿತ ವ್ಯಕ್ತಿಯೋರ್ವ ಬಂದು ಬೈಕ್ ಖರೀದಿಸುವ ನಾಟಕವಾಡಿದ್ದು, ಕಪ್ಪು ಮತ್ತು ಕೆಂಪು ಸ್ಟಿಕ್ಕರ್‌ನ ಟಿವಿಎಸ್ ಸ್ಟಾರ್ ಸಿಟಿ ಬೈಕ್‌ನ್ನು ಖರೀದಿಸುವುದಾಗಿ ತಿಳಿಸಿ ಟೆಸ್ಟ್ ಡ್ರೈವ್‌ಗೆ ಕೊಂಡೊಯ್ದಿದ್ದಾನೆ. ಇದರ ಅಂದಾಜು ಮೌಲ್ಯ 45 ಸಾವಿರ ರೂ. ಎಂದು ತಿಳಿದುಬಂದಿದೆ.

ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News