ಕೆನಡಾ ನೇತೃತ್ವದ ಕೋವಿಡ್ ಸಮಿತಿ ಸಭೆಯಲ್ಲಿ ಭಾಗವಹಿಸದಿರಲು ವಿದೇಶಾಂಗ ಸಚಿವ ಜೈಶಂಕರ್ ನಿರ್ಧಾರ

Update: 2020-12-05 08:32 GMT

ಹೊಸದಿಲ್ಲಿ : ರಾಜಧಾನಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಕುರಿತು ಇತ್ತೀಚೆಗೆ ಹೇಳಿಕೆ ನೀಡಿ ಭಾರತ ಸರಕಾರದ ಅಸಮಾಧಾನಕ್ಕೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಗುರಿಯಾಗಿರುವ  ಘಟನೆಯ ನೇರ ಪರಿಣಾಮ ಎಂಬಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಡಿಸೆಂಬರ್ 7ರಂದು ಕೆನಡಾ ನೇತೃತ್ವದಲ್ಲಿ ನಡೆಯಲಿರುವ ಕೋವಿಡ್-19ಗೆ  ಸಂಬಂಧಿಸಿದ ಮಿನಿಸ್ಟೀರಿಯಲ್ ಕೊ-ಆರ್ಡಿನೇಶನ್ ಗ್ರೂಪ್ ಸಭೆಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ.  ಈ ಕುರಿತು ಕೆನಡಾಗೆ ಈಗಾಗಲೇ ಮಾಹಿತಿ ನೀಡಲಾಗಿದೆ.

 ಇದೇ ಸಂಘಟನೆಯ 11ನೇ ಸಭೆ ನವೆಂಬರ್‍ನಲ್ಲಿ ನಡೆದಾಗ ಜೈಶಂಕರ್ ಅದರಲ್ಲಿ ಭಾಗವಹಿಸಿದ್ದರು. ಈ ಸಂಘಟನೆಯ ಸಭೆಯಲ್ಲಿ ಭಾರತ ಅದೇ ಮೊದಲ ಬಾರಿ ಭಾಗವಹಿಸಿತ್ತು.

ಶುಕ್ರವಾರವಷ್ಟೇ ಕೆನಡಾದ ರಾಯಭಾರಿಯನ್ನು  ಕರೆಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಕುರಿತು ಕೆನಡಾ ಪ್ರಧಾನಿ, ಸಚಿವರು ಹಾಗೂ ಕೆಲ ಸಂಸದರ ಹೇಳಿಕೆಗಳು ಭಾರತದ ಆಂತರಿಕ ವ್ಯವಹಾರಗಳಲ್ಲಿ ಅಸ್ವೀಕಾರ್ಹ ಹಸ್ತಕ್ಷೇಪವಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News