ಡಿಸೆಂಬರ್ 8ರಿಂದ ಈ ಮಹಾನಗರದಲ್ಲಿ ಹೆಲ್ಮೆಟ್ ಧರಿಸದವರಿಗೆ ಪೆಟ್ರೋಲ್ ಕೊಡುವುದಿಲ್ಲ!

Update: 2020-12-05 09:22 GMT

ಕೋಲ್ಕತಾ: ದ್ವಿಚಕ್ರ ವಾಹನಗಳ ಅಪಘಾತಗಳಿಂದಾಗಿ ಉಂಟಾಗುವ ಸಾವು-ನೋವುಗಳನ್ನು ತಪ್ಪಿಸುವ ಪ್ರಯತ್ನದ ಭಾಗವಾಗಿ ಕೋಲ್ಕತಾ ಪೊಲೀಸ್ ಇಲಾಖೆಯು ಡಿಸೆಂಬರ್ 8ರಿಂದ ಫೆಬ್ರವರಿ 5ರ ತನಕ “ನೋ ಹೆಲ್ಮೆಟ್, ನೋ ಫುಯೆಲ್ (ಹೆಲ್ಮೆಟ್ ಧರಿಸದಿದ್ದರೆ, ಇಂಧನ ಸಿಗದು)ಅಭಿಯಾನ ನಡೆಸಲಿದ್ದಾರೆ.

 ನಗರದಲ್ಲಿ ಯಾವುದೇ ಪೆಟ್ರೋಲ್ ಪಂಪ್ ಗಳು ಹೆಲ್ಮೆಟ್ ಇಲ್ಲದೆ ಪೆಟ್ರೋಲ್ ಪಂಪ್ ಗೆ ಬರುವ ಅಥವಾ ಹೆಲ್ಮೆಟ್ ಇಲ್ಲದೆ ಹಿಂಬದಿ ಸವಾರನನ್ನು ಕರೆದೊಯ್ಯುವಂತಹ ಯಾವುದೇ ದ್ವಿಚಕ್ರ ವಾಹನಗಳಸವಾರರಿಗೆ ಪೆಟ್ರೋಲ್ ಮಾರಾಟ ಮಾಡಬಾರದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘

ಈ ಹಿಂದೆ ನೊಯ್ಡಾ, ಅಲಿಗಢ ಹಾಗೂ ಬೆಂಗಳೂರಿನಲ್ಲಿ ಇಂತಹ ನಿಯಮಗಳನ್ನು ಜಾರಿಗೊಳಿಸಲಾಗಿತ್ತು.

"ನಾವು ಈನಿಯಮವನ್ನು ಸ್ವಾಗತಿಸುತ್ತೇವೆ. ಆದರೆ ಕೆಲವು ಬಾರಿ ಪೊಲೀಸರ ರಕ್ಷಣೆಯಿಲ್ಲದೆ ಇಂತಹ ನಿಯಮ ಜಾರಿಗೆ ತರುವುದುಕಷ್ಟವಾಗುತ್ತದೆ'' ಎಂದು ಕೋಲ್ಕತಾದ ಪೆಟ್ರೋಲ್ ಪಂಪ್ ಮಾಲಕರೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News