×
Ad

ಉತ್ತರಪ್ರದೇಶದ 'ಲವ್ ಜಿಹಾದ್' ಕಾನೂನಿನ ವಿರುದ್ಧ ಧ್ವನಿ ಎತ್ತಿದ ತಾಪ್ಸಿ ಪನ್ನು

Update: 2020-12-05 15:16 IST

ಹೊಸದಿಲ್ಲಿ: ನಟಿ ತಾಪ್ಸಿ ಪನ್ನು ಉತ್ತರಪ್ರದೇಶದ ಸರಕಾರ ಹೊಸದಾಗಿ ಜಾರಿಗೆ ತಂದಿರುವ 'ಲವ್ ಜಿಹಾದ್' ಕಾನೂನಿನ ವಿರುದ್ಧ ಮಾತನಾಡಿದ್ದಾರೆ.

ಕಾನೂನು ಬಾಹಿರ ಮತಾಂತರಗಳನ್ನು ತಡೆಗಟ್ಟಲು ಉತ್ತರಪ್ರದೇಶದ ಧಾರ್ಮಿಕ ಮತಾಂತರದ ಸುಗ್ರೀವಾಜ್ಞೆ 2020 ನ್ನು  ನವೆಂಬರ್ 27 ರಂದು ಅಂಗೀಕರಿಸಿತ್ತು.

ಹಿಂದೂ ಮಹಾಸಭಾ ದಿಂದ ದೂರು ಬಂದ ನಂತರ ಲಕ್ನೊ ಪೊಲೀಸರು ಅಂತರ್ ಧರ್ಮೀಯ ವಿವಾಹವನ್ನು ನಿಲ್ಲಿಸಿದ್ದಾರೆ ಎಂಬ ಸುದ್ದಿಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿದ ತಾಪ್ಸಿ, ಈಗ ನಾವು ಮದುವೆಯಾಗಲು ಪೋಷಕರ ಒಪ್ಪಿಗೆ ಸಾಕಾಗುವುದಿಲ್ಲ. ಸರಕಾರದ ಅನುಮತಿಗಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಭವಿಷ್ಯದ ಪೀಳಿಗೆ ಮದುವೆ ಸಂದರ್ಭದಲ್ಲಿ ಏನು ಮಾಡಬೇಕೆಂಬ ಪಟ್ಟಿಯಲ್ಲಿ ದಯವಿಟ್ಟು ಇದನ್ನೂ ಸೇರಿಸಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News