ಗುಜರಾತ್ ಹೈಕೋರ್ಟ್ ನ್ಯಾಯಾಧೀಶ ಹೃದಯಾಘಾತದಿಂದ ನಿಧನ

Update: 2020-12-05 10:35 GMT

ಅಹ್ಮದಾಬಾದ್: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊರೋನ ವೈರಸ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಗುಜರಾತ್ ಹೈಕೋರ್ಟ್ ನ ಹಾಲಿ ನ್ಯಾಯಾಧೀಶ ತೀವ್ರ ಹೃದಯಾಘಾತದಿಂದಾಗಿ ಶನಿವಾರ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ನವೆಂಬರ್ 19 ರಂದು ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದ ಜಸ್ಟಿಸ್ ಜಿ.ಆರ್. ಉಧ್ವಾನಿ(59 ವರ್ಷ)ಅವರಿಗೆ ಎಸ್ ಎ ಎಲ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 7 ಗಂಟೆಗೆ ಹೃದಯಸ್ತಂಭನವಾಗಿತ್ತು. 7:40ಕ್ಕೆ ನಿಧನರಾಗಿರುವುದನ್ನು ಖಚಿತಪಡಿಸಲಾಗಿದೆ. ನವೆಂಬರ್ 22 ರಂದು ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಡಾ.ದಿವ್ಯಾಂಗ್ ದಲ್ವಾಡಿ ತಿಳಿಸಿದ್ದಾರೆ.

ನವೆಂಬರ್ 19 ರಂದು ಉಧ್ವಾನಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು. ಶ್ವಾಸಕೋಶಕ್ಕೆ ತೀವ್ರ ಸೋಂಕು ಉಂಟಾದ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಹೈಪೋಥೈರಾಯ್ಡಿಸಮ್ ನಿಂದಲೂ ಬಳಲುತ್ತಿದ್ದರು. ಡಿಸೆಂಬರ್ 3ರಿಂದ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿದ್ದರು  ಎಂದು ವೈದ್ಯರು ಹೇಳಿದ್ದಾರೆ.

ಅಹ್ಮದಾಬಾದ್  ಮೂಲದ ಜಸ್ಟಿಸ್ ಉಧ್ವಾನಿ 2012ರಲ್ಲಿ ಗುಜರಾತ್ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.  2014ರ ಜುಲೈ 10ರಿಂದ ಖಾಯಂ ನ್ಯಾಯಾಧೀಶರಾಗಿದ್ದರು. ಮೂರು ದಶಕಗಳ ವೃತ್ತಿಬದುಕಿನಲ್ಲಿ ಜಸ್ಟಿಸ್ ಉಧ್ವಾನಿ ಅವರು 2003ರಲ್ಲಿ ವಿಶೇಷ ಪೋಟಾದ (ಭಯೋತ್ಪಾದಕ ತಡೆ ಕಾಯ್ದೆ) ಹೆಚ್ಚುವರಿ ನ್ಯಾಯಾಧೀಶರಾಗಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News