ದಿಲ್ಲಿಯಲ್ಲಿ ರೈತರ ಪ್ರತಿಭಟನೆಗೆ ಮತ್ತೊಮ್ಮೆ ಕಳವಳ ವ್ಯಕ್ತಪಡಿಸಿದ ಕೆನಡಾ ಪ್ರಧಾನಿ ಟ್ರೂಡೊ

Update: 2020-12-05 11:46 GMT

ಹೊಸದಿಲ್ಲಿ: ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೊ ಭಾರತದ ರೈತರ ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಮತ್ತೊಮ್ಮೆ ಬೆಂಬಲಿಸಿದರು. ಟ್ರೂಡೊ ಅವರು ಭಾರತದ ರೈತರ ಕುರಿತು ಈ ಹಿಂದೆ ನೀಡಿದ್ದ ಹೇಳಿಕೆಗೆ ಕೇಂದ್ರ ಸರಕಾರವು ದೇಶದಲ್ಲಿರುವ ಕೆನಡಾದ ಹೈಕಮಿಶನರ್ ಮುಂದೆ ತನ್ನ  ಪ್ರತಿಭಟನೆ ಸಲ್ಲಿಸಿದ ಕೆಲವೇ ಗಂಟೆಗಳ ಬಳಿಕ ಟ್ರೂಡೊ ತನ್ನ ಹೇಳಿಕೆಯನ್ನು ಪುನರುಚ್ಚರಿಸಿದರು.

ಕೆನಡಾ ಪ್ರಪಂಚದಾದ್ಯಂತ ಎಲ್ಲಿಯಾದರೂ ಶಾಂತಿಯುತ ಪ್ರತಿಭಟನೆಗಳ ಹಕ್ಕಿನ ಪರವಾಗಿ ಸದಾ ಕಾಲ ನಿಲ್ಲುತ್ತದೆ. ಪರಸ್ಪರ ಮಾತುಕತೆಯತ್ತ ಸಾಗುವುದನ್ನು  ನಾವು ಸಂತೋಷಪಡುತ್ತೇವೆ ಎಂದು ಒಟ್ಟಾವಾದಲ್ಲಿ ಸುದ್ದಿಗಾರರಿಗೆ ಟ್ರೂಡೊ ತಿಳಿಸಿದರು.

ಭಾರತದ ರೈತರ ಪ್ರತಿಭಟನೆಯಕುರಿತು ನಿಮ್ಮ ಹೇಳಿಕೆಯಿಂದ ಪರಿಣಾಮ ಉಂಟಾಗುತ್ತಿರುವ ಕುರಿತು ಕೇಳಿದಾಗ, ತನ್ನ ಮೊದಲಿನ ಹೇಳಿಕೆಯನ್ನು ಪುನರಾವರ್ತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News