×
Ad

ಮೂಳೂರು ಮಸೀದಿಯ 'ಎಂಜೆಎಂ ಆ್ಯಪ್' ಬಿಡುಗಡೆ

Update: 2020-12-05 17:32 IST

ಕಾಪು : ಜಿಲ್ಲೆಯ ಪ್ರತಿಷ್ಠಿತ ಜಮಾಅತ್‍ಗಳಲ್ಲಿ ಒಂದಾಗಿರುವ ಮೂಳೂರು ಜುಮ್ಮಾ ಮಸೀದಿ ಇದರ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಎಂಜೆಎಂ ಆ್ಯಪ್  ಪರಿಚಯಿಸುವ ಮೂಲಕ ಗಮನ ಸೆಳೆದಿದೆ.

ಮೂಳೂರು, ಉಚ್ಚಿಲ, ಪಯ್ಯಾರ್, ಕೊಪ್ಪಲಂಗಡಿ, ಪಣಿಯೂರು ಒಳಗೊಂಡು ಜಿಲ್ಲೆಯಲ್ಲಿ ಅತೀ ದೊಡ್ಡ ಜಮಾಅತ್‍ಗಳಲ್ಲಿ ಮೂಳೂರು ಜಮಾಅತ್ ಒಂದು. ಜಮಾಅತ್ ವ್ಯಾಪ್ತಿಗೊಳಪಟ್ಟು 624 ಮನೆಗಳಿವೆ. ಜಮಾತಿನ ಎಲ್ಲಾ ವಿವರಗಳು ಸಾಫ್ಟ್‍ವೇರ್ ಮೂಲಕ ಡಿಜಿಟಲೀಕ ರಣ ಗೊಳಿಸಿದ್ದು, ಇದೀಗ ಮತ್ತಷ್ಟು ಪಾರದರ್ಶಕಗೊಳಿಸಲು ಮಸೀದಿಯ ಎಂಜೆಎಂ ಆ್ಯಪ್ ತಯಾರುಗೊಳಿಸಲಾಗಿದೆ.

ಈ ಅಪ್ಲಿಕೇಶನ್ ಮೂಲಕ ಜಮಾತರು ಎಲ್ಲಿದ್ದರೂ ತಮ್ಮ ಮಸೀದಿ ಚಂದಾವಿವರವನ್ನು ಪಡೆದುಕೊಳ್ಳಬಹುದು.  ಅಲ್ಲದೆ ಜಮಾತಿನ ಸಂಪೂರ್ಣ ಮಾಹಿತಿ, ಮುಂದಿನ ಯೋಜನೆಗಳು, ಸಮಿತಿಯ ಹಾಗು ಸಿಬ್ಬಂದಿಗಳ ವಿವರ ಮತ್ತು ಸಂಪರ್ಕ ಸಂಖ್ಯೆ, ಸಮಯ, ಹಿಜರಿ ದಿನ ಹಾಗು ಮಸೀದಿ ಕೇಂದ್ರೀಕರಿಸಿ ಐದು ವಕ್ತ್ ನಮಾಝಿನ ಸಮಯ ಲಭ್ಯ ವಿರುತ್ತದೆ ಎಂದು ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಸ್ವಾಗತಿಸಿ ಆಪ್‍ನ ಬಗ್ಗೆ ವಿವರಣೆ ನೀಡಿದರು.

ಮುಂದಿನ ದಿನದಲ್ಲಿ ಈ ಆಪ್‍ನ್ನು  ಮತ್ತಷ್ಟು ಸಂಪರ್ಕ ಸಾಧನವಾಗಿ ಬದಲಾವಣೆ ಮಾಡಲಿಕ್ಕಿದೆಯೆಂದು ಅಪ್ಲಿಕೇಶನ್ ತಯಾರಿಸಿದ ಜಮಾತ್ ಸದಸ್ಯ ಫಾರೂಕ್ ಉಚ್ಚಿಲ ವಿವರಿಸಿದರು.

ಆ್ಯಪ್ ಬಳಸುವ ವಿಧಾನ: ಜಮಾತಿನ ಮುಖ್ಯ ಸದಸ್ಯ (ಯಜಮಾನ) ತನ್ನ ಅಂಡ್ರಾಯ್ಡ್ ಮೊಬೈಲ್‍ನಲ್ಲಿ ಈ ಆಪ್ ಅಳವಡಿಸಿದರೆ ಅವರ ಜಮಾಅತ್ ಸಂಖ್ಯೆ, ಹಾಗೂ ಮಸೀದಿಗೆ ನೀಡಿದ ಮೊಬೈಲ್ ಸಂಖ್ಯೆಯನ್ನು ಪಾಸ್ವರ್ಡ್ ಆಗಿ ಉಪಯೋಗಿಸಿ ಸೈನ್‍ಇನ್ ಮಾಡಬೇಕು. ನಂತರ ಬೇಕಿದ್ದಲ್ಲಿ ಮೊಬೈಲ್ ಸಂಖ್ಯೆಯ ಪಾಸ್ವರ್ಡ್ ಬದಲಾವಣೆ ಮಾಡಬಹುದು. ಬಳಿಕ ಆ್ಯಪ್  ಮೂಲಕ ಸಂಪೂರ್ಣ ವಿವರಗಳನ್ನು ಪಡೆದು ಕೊಳ್ಳಬಹುದು. ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಕಛೇರಿ ಸಂಖ್ಯೆಯನ್ನು ಸಂಪರ್ಕಿಸಿ 7026471887 ಎಂದು ಪ್ರಕಟನೆ ತಿಳಿಸಿದೆ.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಸೀದಿ ಸಮಿತಿಯ ಉಪಾಧ್ಯಕ್ಷ ಸೈಯ್ಯದ್ ಮುರಾದ್ ಅಲಿ ಆಪ್‍ನ್ನು ಬಿಡುಗಡೆ ಗೊಳಿಸಿದರು. ಮೂಳೂರು ಜುಮಾ ಮಸೀದಿಯ ಮುದರ್ರಿಸ್ ಅಬ್ದುಲ್ಹಾ ರಹಿಮಾನ್ ಮದನಿ ಉಸ್ತಾದ್ ದುವಾಶೀರ್ವಚನ ನೆರವೇರಿಸಿದರು.

ಹೈದರ್ ಅಲಿ ಅಹ್ಸನಿ ಉಸ್ತಾದ್, ಉಪಾಧ್ಯಕ್ಷ ಜಿಎಂ ಉಮ್ಮರಬ್ಬ, ಗೌರಧ್ಯಕ್ಷ ಮೊಯಿದಿನ್ ದರ್ಕಾಸ್, ಕೋಶಾಧಿಕಾರಿ ಅಬ್ಬು ಹಾಜಿ ಹಾಗು ಇಬ್ರಾಹಿಂ ನಹೀಮಿ ಉಸ್ತಾದ್ ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಅಬ್ದುಲ್ ಹಮೀದ್ ಯೂಸುಫ್ ಮತ್ತು ಫೈಝಲ್ ಇಬ್ರಾಹಿಂ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News