ದ.ಕ. ಜಿಲ್ಲೆ : 37 ಮಂದಿಗೆ ಕೊರೋನ ಪಾಸಿಟಿವ್, ಓರ್ವ ಬಲಿ

Update: 2020-12-05 15:54 GMT

ಮಂಗಳೂರು, ಡಿ.5: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಮತ್ತೋರ್ವ ಬಲಿಯಾಗಿದ್ದಾರೆ. ಶನಿವಾರ ಹೊಸದಾಗಿ 37 ಮಂದಿಗೆ ಸೋಂಕು ತಗುಲಿದ್ದು, 33 ಮಂದಿ ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿನ 32,108 ಸೋಂಕಿತರ ಪೈಕಿ 30,824 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ನಿಂದಾಗಿ ಜಿಲ್ಲೆಯಲ್ಲಿ 716 ಮಂದಿ ಅಸುನೀಗಿ ದ್ದಾರೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳು ಹಾಗೂ ಮನೆಗಳಲ್ಲಿ 568 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 15,438 ಮಾಸ್ಕ್ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿದ್ದು, 16,53,217 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News