ಗ್ರಾಪಂ ಸಾರ್ವತ್ರಿಕ ಚುನಾವಣೆ: ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್

Update: 2020-12-05 16:19 GMT

ಮಂಗಳೂರು, ಡಿ.5: ಗ್ರಾಪಂಗಳ ಸಾರ್ವತ್ರಿಕ ಚುನಾವಣೆ ಸಂಬಂಧ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಅಕ್ರಮ ಮದ್ಯ ದಾಸ್ತಾನು/ ಸಾಗಣೆ ಬಗ್ಗೆ ಸಾರ್ವಜನಿಕರ ದೂರು ಸ್ವೀಕರಿಸಲು ಹಾಗೂ ಚುನಾವಣಾ ಆಯೋಗದ ನಿರ್ದೇಶನ ಪಾಲಿಸಲು ಅಬಕಾರಿ ಇಲಾಖೆಯಿಂದ ಜಿಲ್ಲಾ ಕೇಂದ್ರ ಕಚೇರಿಯಲ್ಲಿ/ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಮ್‌ಗಳನ್ನು ತೆರೆಯಲಾಗಿದೆ.

ಮಂಗಳೂರು ತಾಲೂಕು ಅಬಕಾರಿ ಉಪ ಆಯುಕ್ತರ ಕಚೇರಿ, ಅಬಕಾರಿ ಭವನ, ಮೇರಿಹಿಲ್, ದೂ.ಸಂ.: 0824- 2213872, ಬಂಟ್ವಾಳ ತಾಲೂಕು ಅಬಕಾರಿ ನಿರೀಕ್ಷಕರ ಕಚೇರಿ, ಬಂಟ್ವಾಳ ವಲಯ, ದೂ.ಸಂ.: 08255- 232726, ಪುತ್ತೂರು ತಾಲೂಕು ಅಬಕಾರಿ ನಿರೀಕ್ಷಕರ ಕಚೇರಿ, ಪುತ್ತೂರು ವಲಯ, ದೂ.ಸಂ.: 08251- 298481, ಬೆಳ್ತಂಗಡಿ ತಾಲೂಕು ಅಬಕಾರಿ ನಿರೀಕ್ಷಕರ ಕಚೇರಿ, ದೂ.ಸಂ.: 08256- 298757, ಸುಳ್ಯ ತಾಲೂಕು ಅಬಕಾರಿ ನಿರೀಕ್ಷಕರ ಕಚೇರಿ, ದೂ.ಸಂ.: 08257-231309, ಅಬಕಾರಿ ಆಯುಕ್ತರ ಕಚೇರಿ ಬೆಂಗಳೂರು ಟೋಲ್ ಪ್ರೀ ಸಂಖ್ಯೆ: 18004252550ನ್ನು ಸಂಪರ್ಕಿಸಬಹುದು.

ಕಂಟ್ರೋಲ್ ರೂಮ್‌ಗಳು ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಅಬಕಾರಿ ಅಕ್ರಮಗಳ ಬಗ್ಗೆ ಮಾಹಿತಿಯನ್ನು ಕಂಟ್ರೋಲ್ ರೂಮ್‌ಗಳ ದೂರವಾಣಿ ಸಂಖ್ಯೆಗೆ ನೀಡಬಹುದಾಗಿದೆ ಎಂದು ಜಿಲ್ಲೆಯ ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News