ಬಟ್ಟೆ ಅಂಗಡಿಗೆ ನುಗ್ಗಿ ನಗದು ಕಳವು

Update: 2020-12-05 16:20 GMT

ಕೋಟ, ಡಿ.5: ಗಿಳಿಯಾರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಬಟ್ಟೆ ಅಂಗಡಿಗೆ ಡಿ.3ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು, ಕಚೇರಿಯಲ್ಲಿರಿಸಿದ್ದ ಲಕ್ಷಾಂತರ ರೂ. ಹಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಸಾಲಿಗ್ರಾಮದ ಮಹಾಬಲ ಕುಲಾಲ್ ಎಂಬವರ ಹನುಮಾನ್ ಸಿಲ್ಕ್ ಬಟ್ಟೆ ಅಂಗಡಿಯ ತಗಡು ಶೀಟನ್ನು ತೆಗೆದು ಒಳ ನುಗ್ಗಿದ ಕಳ್ಳರು, ಮೊದಲನೆ ಮಹಡಿಯಲ್ಲಿರುವ ಕಚೇರಿ ಬಾಗಿಲಿನ ಚಿಲಕ ಮುರಿದು, ಗೋಡ್ರೇಜ್ ಕಾಪಾಟಿನಲ್ಲಿಟ್ಟಿದ್ದ ವ್ಯವಹಾರದ 1,45,000ರೂ. ಹಣವನ್ನು ಕಳವು ಮಾಡಿ ಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News