ಚೀನಾ ವಿರುದ್ಧ ಕಾನೂನು ರೂಪಿಸಲು ಎಲ್ಲ ದೇಶಗಳಿಗೆ ಅಮೆರಿಕ ಒತ್ತಾಯ

Update: 2020-12-05 17:38 GMT

ವಾಶಿಂಗ್ಟನ್, ಡಿ. 5: ಟಿಬೆಟ್‌ನಲ್ಲಿ ದಮನಕಾರಿ ಸರಕಾರವೊಂದನ್ನು ನಡೆಸುತ್ತಿರುವುದಕ್ಕಾಗಿ ಚೀನಾವನ್ನು ಖಂಡಿಸಿರುವ ಅಮೆರಿಕದ ಉನ್ನತ ರಾಜತಾಂತ್ರಿಕರೊಬ್ಬರು, ಈ ಸಂಬಂಧ ಅಮೆರಿಕದ ಮಾದರಿಯಲ್ಲಿ ಕಾನೂನುಗಳನ್ನು ರಚಿಸುವಂತೆ ಜಗತ್ತಿನ ದೇಶಗಳನ್ನು ಒತ್ತಾಯಿಸಿದ್ದಾರೆ.

ಟಿಬೆಟ್‌ಗೆ ವಿದೇಶೀಯರ ಭೇಟಿ ನಿರ್ಬಂಧಕ್ಕೆ ಹೊಣೆಗಾರರರಾಗಿರುವ ಅಧಿಕಾರಿಗಳಿಗೆ ಅಮೆರಿಕ ಭೇಟಿಯನ್ನು ನಿಷೇಧಿಸುವ ಕಾನೂನೊಂದನ್ನು ಅಮೆರಿಕ ಈಗಾಗಲೇ ಜಾರಿಗೊಳಿಸಿದೆ.

ಚೀನಾದ ರಾಜತಾಂತ್ರಿಕರು, ಪತ್ರಕರ್ತರು ಮತ್ತು ನಾಗರಿಕರಿಗೆ ಇತರ ದೇಶಗಳು ನೀಡುತ್ತಿರುವ ಪ್ರವೇಶದ ಮಾದರಿಯಲ್ಲೇ, ರಾಜತಾಂತ್ರಿಕರು ಮತ್ತು ಪತ್ರಕರ್ತರು ಸೇರಿದಂತೆ ಟಿಬೆಟ್ ಭೂಭಾಗಗಳಲ್ಲಿ ಪ್ರಯಾಣಿಸುತ್ತಿರುವ ವಿದೇಶೀಯರಿಗೆ ಚೀನಾವು ಅನಿರ್ಬಂಧಿತ ಪ್ರವೇಶ ನೀಡಬೇಕು ಎಂಬುದಾಗಿ ಅಮೆರಿಕ ಮತ್ತು ಅದರ ಮಿತ್ರ ದೇಶಗಳು ಚೀನಾಕ್ಕೆ ಈಗಾಗಲೇ ಕರೆ ನೀಡಿವೆ ಹಾಗೂ ಕರೆ ನೀಡುವುದನ್ನು ಮುಂದುವರಿಸಲಿವೆ ಎಂದು ಅಮೆರಿಕದ ಟಿಬೆಟ್ ವ್ಯವಹಾರಗಳ ವಿಶೇಷ ಸಮನ್ವಯಕಾರ ರಾಬರ್ಟ್ ಎ. ಡೆಸ್ಟ್ರೊ ಶುಕ್ರವಾರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News