​ದೇಶದಲ್ಲಿ 1.4 ಲಕ್ಷ ದಾಟಿದ ಕೋವಿಡ್ ಸಾವು

Update: 2020-12-06 03:39 GMT

ಹೊಸದಿಲ್ಲಿ, ಡಿ.6: ದೇಶದಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ ಶನಿವಾರ 1.4 ಲಕ್ಷ ದಾಟಿದೆ. ಈ ಮಧ್ಯೆ ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷದ ಆಸುಪಾಸಿನಲ್ಲಿದ್ದು, 137 ದಿನಗಳಲ್ಲೇ ಕನಿಷ್ಠ ಸಂಖ್ಯೆ ಇದಾಗಿದೆ. ಹೊಸ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಇಳಿಯುತ್ತಿದೆ. ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 1,40,167 ಆಗಿದ್ದು, ಶನಿವಾರ 482 ಮಂದಿ ಬಲಿಯಾಗಿದ್ದಾರೆ.

ಅಮೆರಿಕ (2,85,550) ಮತ್ತು ಬ್ರೆಝಿಲ್ (1,75,981) ಹೊರತುಪಡಿಸಿದರೆ ಇಡೀ ವಿಶ್ವದಲ್ಲೇ ಕೋವಿಡ್-19ನಿಂದ ಮೃತಪಟ್ಟವರ ಸಂಖ್ಯೆ ಭಾರತದಲ್ಲಿ ಅತ್ಯಧಿಕ.

ಕಳೆದ ಐದು ದಿನಗಳಲ್ಲಿ ಇದೇ ಮೊದಲ ಬಾರಿಗೆ ಶನಿವಾರ ಸಾವಿನ ಸಂಖ್ಯೆ 500ಕ್ಕಿಂತ ಕಡಿಮೆ ಆಗಿದೆ. ಸೋಂಕಿತರ ಪೈಕಿ ಸಾವಿನ ದರ 1.5% ಇದೆ. ಇದು ಕೂಡಾ ನಿಧಾನವಾಗಿ ಕಡಿಮೆಯಾಗುತ್ತಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,04,000 ಇದ್ದು, ಇದು ಜುಲೈ 21ರ ಬಳಿಕ ಕನಿಷ್ಠ ಸಂಖ್ಯೆಯಾಗಿದೆ. ದಿನಕ್ಕೆ ಸುಮಾರು 6,000 ಸಕ್ರಿಯ ಪ್ರಕರಣಗಳು ಕಡಿಮೆಯಾಗುತ್ತಿವೆ. ರವಿವಾರ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷದಿಂದ ಕಡಿಮೆಯಾಗುವ ನಿರೀಕ್ಷೆ ಇದೆ. ದೈನಿಕ ಪ್ರಕರಣಗಳ ಸಂಖ್ಯೆ 36 ಸಾವಿರದಿಂದ 37 ಸಾವಿರದ ಮಧ್ಯೆ ಕಳೆದ ಐದು ದಿನಗಳಿಂದ ದಾಖಲಾಗುತ್ತಿದ್ದು, ಕಳೆದ ವಾರ ಸರಾಸರಿ 41,700 ಪ್ರಕರಣಗಳು ದಾಖಲಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News