ಕೋವಿಡ್ ಲಸಿಕೆ ಬಳಕೆಗೆ ಭಾರತದ ಅನುಮೋದನೆ ಕೋರಿದ ಫೈಝರ್
Update: 2020-12-06 10:44 IST
ಹೊಸದಿಲ್ಲಿ: ಅಮೆರಿಕದ ಫಾರ್ಮಾ ಕಂಪೆನಿ ಫೈಝರ್ ಕೊರೋನ ವೈರಸ್ ಲಸಿಕೆಯ ತುರ್ತು ಬಳಕೆಯ ಅಧಿಕಾರಕ್ಕಾಗಿ ಭಾರತದ ಔಷಧ ನಿಯಂತ್ರಕ ಡ್ರಗ್ಸ್ ಕಂಟ್ರೋಲ್ ಆಫ್ ಇಂಡಿಯಾದ(ಡಿಸಿಜಿಐ) ಅನುಮತಿ ಕೋರಿದೆ ಎಂದು ಮೂಲಗಳು ತಿಳಿಸಿವೆ.
ಫೈಝರ್ ಜರ್ಮನಿಯ ಕಂಪೆನಿ ಬಯೋಎನ್‌ಟೆಕ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಬ್ರಿಟನ್ ಹಾಗೂ ಬಹರೈನ್ ದೇಶಗಳು ಈಗಾಗಲೇ ಅನುಮೋದನೆ ನೀಡಿವೆ.
ಭಾರತದಲ್ಲಿ 96 ಲಕ್ಷ ಕ್ಕೂ ಅಧಿಕ ಜನರಿಗೆ ಕೊರೋನ ಸೋಂಕು ತಗಲಿದೆ. ಮಾರಣಾಂತಿಕ ಕೊರೋನಕ್ಕೆ ಲಸಿಕೆ ಹುಡುಕುವ ಸ್ಪರ್ಧೆ ಏರ್ಪಟ್ಟಿರುವ ಮಧ್ಯೆ ಡಿಸಿಜಿಐ ಸ್ವೀಕರಿಸಿರುವ ಮೊದಲ ಕೋರಿಕೆ ಇದಾಗಿದೆ.
ಫೈಝರ್ ಇಂಡಿಯಾ ಡಿಸೆಂಬರ್ 4 ರಂದು ಸಲ್ಲಿಸಿದ ಅರ್ಜಿಯಲ್ಲಿ ದೇಶದಲ್ಲಿ ಮಾರಾಟ ಹಾಗೂ ವಿತರಣೆಗಾಗಿ ಲಸಿಕೆಯನ್ನು ಆಮದುಮಾಡಿಕೊಳ್ಳಲು ಅನುಮೋದನೆ ಕೋರಿದೆ.
...