ಗ್ಯಾಸ್ ಸಿಲಿಂಡರ್ ಸ್ಫೋಟ: 16 ಜನರಿಗೆ ಗಾಯ
ಮುಂಬೈ: ದಕ್ಷಿಣ ಮುಂಬೈನ ಲಾಲ್‌ಬಾಗ್ ಪ್ರದೇಶದ ಜನವಸತಿ ಕಟ್ಟಡದಲ್ಲಿ ರವಿವಾರ ಬೆಳಗ್ಗೆ ಗ್ಯಾಸ್ ಸಿಲಿಂಡರ್‌ವೊಂದು ಸ್ಫೋಟಗೊಂಡ ಪರಿಣಾಮ ಕನಿಷ್ಠ 16 ಜನರಿಗೆ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಎರಡು ಅಗ್ನಿಶಾಮಕ ದಳ ಹಾಗೂ ಎರಡು ಬೃಹತ್ ಟ್ಯಾಂಕರ್‌ಗಳು ಧಾವಿಸಿವೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ ತಿಳಿಸಿದೆ ಎಂದು ಎಎನ್‌ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಅಗ್ನಿಶಾಮಕ ಇಲಾಖೆಯ ಪ್ರಕಾರ ಲೆವೆಲ್-1(ಮೈನರ್)ಬೆಂಕಿಯು ಕಟ್ಟಡದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಗ್ಯಾಸ್ ಸಿಲಿಂಡರ್‌ವೊಂದು ಸ್ಫೋಟಿಸಿದೆ.
ಬೆಳಗ್ಗೆ 7:23ರ ಸುಮಾರಿಗೆ ಘಟನೆ ನಡೆದಿದೆ ಎಂದು ಕಟ್ಟಡದ ನಿವಾಸಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ಅಧಿಕಾರಿಗಳಿಗೆ ಬೆಂಕಿ ನಿಯಂತ್ರಿಸಲು ಸುಮಾರು ಅರ್ಧಗಂಟೆ ಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡಿರುವ 12 ಜನರನ್ನು ಕೆಇಎಂ ಆಸ್ಪತ್ರೆಗೆ, ಇನ್ನು ನಾಲ್ವರನ್ನು ದಕ್ಷಿಣ ಮುಂಬೈನ ಪರೇಲ್‌ನಲ್ಲಿರುವ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.