ಭಟ್ಕಳ : ಗ್ರಾಮ ಲೆಕ್ಕಾಧಿಕಾರಿ ನಾಪತ್ತೆ
ಭಟ್ಕಳ : ಗೆಳೆಯರೊಂದಿಗೆ ಹೊನ್ನಾವರಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾಗಿರುವ ಗ್ರಾಮ ಲೆಕ್ಕಾಧಿಕಾರಿ ಶೇಖರ ಜ್ಯೋತಿಬಾ ಕಾಲೇಕರ್ ಎಂದು ತಿಳಿದುಬಂದಿದೆ.
ಇವರು ಕಳೆದ ಇರಡು ವರ್ಷದಿಂದ ಬೈಲೂರು ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಿಗೆ ಕಿಡ್ನಿ ಸಮಸ್ಯೆ ಇರುವುರಿಂದ ಕಳೆದ 2 ವರ್ಷದ ಹಿಂದೆ ಶಿವಮೊಗ್ಗದ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಗುರುವಾರ ಸಂಜೆ 6 ಗಂಟೆ ಸುಮಾರಿಗೆ ತನ್ನ ಗೆಳೆಯರೊಂದಿಗೆ ಹೊನ್ನಾವರಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದು, ರಾತ್ರಿ 7.20ರ ಸುಮಾರಿಗೆ ಪತ್ನಿಗೆ ಕರೆ ಮಾಡಿ ಹೊನ್ನಾವರದಲ್ಲಿ ಇದ್ದೇನೆ. ಮನೆಗೆ ಬರುವುದು ರಾತ್ರಿ 9.30 ಆಗಬಹುದು ಮೊಬೈಲ್ ನಲ್ಲಿ ಚಾರ್ಜ್ ಇಲ್ಲಾ ಸ್ವೀಚ್ ಅಫ್ ಆಗುವುದಾಗಿ ಹೇಳಿದ್ದು, ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಮುರುಡೇಶ್ವ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.