ಬಿ. ಅಹ್ಮದ್ ಹಾಜಿ ಸ್ಮರಣಾರ್ಥ ವಾಲಿಬಾಲ್ ಪಂದ್ಯಾಟ ಅರ್ಥಪೂರ್ಣ: ಬಿ.ಅಬ್ದುಲ್ ಸಲಾಂ

Update: 2020-12-06 14:18 GMT

ಬಂಟ್ವಾಳ, ಡಿ. 6: ತುಂಬೆ ಬಿ.ಎ. ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ದಿ. ಡಾ. ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರ ಸ್ಮರಣಾರ್ಥ ಬಂಟ್ವಾಳ ತಾಲೂಕು ಮಟ್ಟದ ಆಹ್ವಾನಿತ ಆರು ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ತುಂಬೆ ಬಿ.ಎ‌. ಕ್ರೀಡಾಂಗಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಬಿ.ಎ‌. ಗ್ರೂಪ್ ತುಂಬೆ ಇದರ ಆಡಳಿತ ನಿರ್ದೇಶಕ ಬಿ.ಅಬ್ದುಲ್ ಸಲಾಂ, ಶಿಕ್ಷಣ ಪ್ರೇಮಿಯಾದ ನನ್ನ ತಂದೆ ಅಹ್ಮದ್ ಹಾಜಿ ಅವರು ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ಪ್ರಾಮುಖ್ಯತೆ ಮತ್ತು ಪ್ರೋತ್ಸಾಹ ನೀಡುತ್ತಿದ್ದರು. ಅವರ ಸ್ಮರಣಾರ್ಥವಾಗಿ ತುಂಬೆ ಕಾಲೇಜಿನ ಹಳೆ ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯಾಟ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದರು.   

ಕ್ರೀಡೆ ಸೌಹಾರ್ದದ ಸಂಕೇತ ಆಗಿರುವುದರಿಂದ ಅಹ್ಮದ್ ಹಾಜಿ ಅವರು ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದರು. ಕ್ರೀಡಾಪಟುಗಳು ಕ್ರೀಡೆಯಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಲ್ಲರೂ ಉತ್ತಮ ಪ್ರದರ್ಶನ ನೀಡಬೇಕು ಎಂದು ಅವರು ಶುಭ ಹಾರೈಸಿದರು. 

ವೇದಿಕೆಯಲ್ಲಿ ಬಿ.ಎ. ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಬಿ.ಅಬ್ದುಲ್ ಕಬೀರ್, ಬಿ.ಜಗದೀಶ್ ರೈ, ಸುದೀರ್ ಕೊಪ್ಪಳ ಉಪಸ್ಥಿತರಿದ್ದರು. 

ಶ್ರೀಕಾಂತ್ ಶೆಟ್ಟಿ, ಮುಹಮ್ಮದ್ ವಳವೂರು, ಪ್ರವೀಣ್ ತುಂಬೆ, ಮುಹಮ್ಮದ್ ಶರೀಫ್, ಲುಕ್ಮಾನ್, ಗಣೇಶ ಸುವರ್ಣ, ಬೇಬಿ ಕುಂದರ್, ಸೋಮಪ್ಪ ಕೋಟ್ಯಾನ್, ಝಹೂರ್ ತುಂಬೆ, ಇಮ್ತಿಯಾಝ್ ಅಲ್ಫಾ, ಮುಹಮ್ಮದ್ ಇರ್ಫಾನ್ ತುಂಬೆ, ಹ್ಯೂಬರ್ಟ್ ಮೇರಮಜಲು, ಮುಹಮ್ಮದ್ ಬೊಳ್ಳಾಯಿ, ಅಯ್ಯೂಬ್ ಫರಂಗಿಪೇಟೆ, ಶಬೀರ್ ಕೆಂ.ಪಿ. ಪಂದ್ಯಾಟಕ್ಕೆ ಆಗಮಿಸಿ ಶುಭ ಹಾರೈಸಿದರು. 

ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಜಗದೀಶ್ ರೈ, ಸುಪ್ರೀತ್ ಆಳ್ವ, ಇಸಾಕ್ ನಂದಾವರ ಅವರನ್ನು ಸನ್ಮಾನಿಸಲಾಯಿತು. ಆರೀಫ್ ತಲಪಾಡಿ, ಆರೀಫ್ ಪರ್ಲಿಯಾ, ಅನೀಶ್, ಜಾಹೀರ್, ಶೌಕತ್ ಅಲಿ ರಾಮಲ್ ಕಟ್ಟೆ, ಮುಹಿಶಿನ್, ಝಿಯಾ ಬೊಳ್ಳಾಯಿ ಸಹಕರಿಸಿದರು. 

ಸಾಯಿರಾಮ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಮಜೀದ್ ಪರ್ಲಿಯಾ ಪ್ರಸ್ತಾವನೆಗೈದರು. ಶೌಕತ್ ನಂದಾವರ ಸ್ವಾಗತಿಸಿದರು. ಶಾಹೀದ್ ತುಂಬೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News