×
Ad

ತೋಟಗಾರಿಕಾ ಸಸಿಗಳು ಇಲಾಖಾ ದರದಲ್ಲಿ ಮಾರಾಟ

Update: 2020-12-06 20:46 IST

ಉಡುಪಿ, ಡಿ.6: ಜಿಲ್ಲೆಯ ತೋಟಗಾರಿಕೆ ಕ್ಷೇತ್ರಗಳಲ್ಲಿ ರೈತರ ಹಾಗೂ ಸಾರ್ವಜನಿಕರ ಬೇಡಿಕೆ ಆಧಾರದ ಮೇಲೆ ತೋಟಗಾರಿಕಾ ಕಸಿ/ ಸಸಿ ಗಿಡಗಳನ್ನು ಉತ್ಪಾದಿಸಿ ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ತೋಟಗಾರಿಕೆ ನಿರ್ದೇಶನಾಲಯದ ಸುತ್ತೋಲೆ ಪ್ರಕಾರ ಕಸಿ/ ಸಸಿ ಗಿಡಗಳ ಮಾರಾಟ ದರವನ್ನು ಪರಿಷ್ಕರಿಸಲಾಗಿದ್ದು, ಪರಿಷ್ಕರಿಸಿದ ಮಾರಾಟ ದರಗಳ ವಿವರಗಳು ಹೀಗಿವೆ.

ಅಡಿಕೆ ಸಸಿಗೆ 20 ರೂ, ಕಸಿ ಗೇರು ಗಿಡ 32 ರೂ, ಕಾಳು ಮೆಣಸು 11ರೂ, ಕಸಿ ಕಾಳುಮೆಣಸು 32 ರೂ, ಕೋಕೊ 11 ರೂ, ತೆಂಗು (ಸ್ಥಳೀಯ) 70 ರೂ, ತೆಂಗು (ಹೈಬ್ರೀಡ್) 160 ರೂ, ನಿಂಬೆ 15 ರೂ, ಕರಿಬೇವು 12 ರೂ, ಮಲ್ಲಿಗೆಗೆ 10 ರೂ. ಪರಿಷ್ಕೃತ ಮಾರಾಟ ದರ ನಿಗದಿಪಡಿಸ ಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News