×
Ad

ಮೀಸಲಾತಿ ರದ್ಧತಿ ಷಡ್ಯಂತರದ ವಿರುದ್ಧ ಆಕ್ರಮಣಶೀಲ ಹೋರಾಟ ಅಗತ್ಯ: ಪ್ರೊ.ಫಣಿರಾಜ್

Update: 2020-12-06 20:50 IST

ಉಡುಪಿ, ಡಿ. 6: ಮೀಸಲಾತಿ ವಿರುದ್ದ ಸುಪ್ರೀಂ ಕೋರ್ಟಿನಲ್ಲಿ ಈಗಾಗಲೇ 10 ದಾವೆಗಳನ್ನು ಹೂಡಲಾಗಿದ್ದು, ಮುಂದೆ ಮೀಸಲಾತಿ ರದ್ದು ಗೊಳಿಸುವ ತೀರ್ಪು ಬಂದರೂ ಅಚ್ಚರಿ ಪಡಬೇಕಾಗಿಲ್ಲ. ಆದುದರಿಂದ ಮೀಸಲಾತಿ ತೆಗೆದು ಹಾಕುವ ಷಡ್ಯಂತರದ ವಿರುದ್ಧ ಬೀದಿಗೆ ಇಳಿದು ಆಕ್ರಮಣಶೀಲ ಹೋರಾಟ ಮಾಡಬೇಕಾಗಿದೆ. ಸಂವಿಧಾನ ಬೇಕಾಗಿರುವುದು ಈ ದೇಶದ ದಲಿತರು, ಅಲ್ಪ ಸಂಖ್ಯಾತರು ಹಾಗೂ ಮಹಿಳೆಯರಿಗೆ ಬಿಟ್ಟರೆ ಮೇಲ್ಜಾತಿಯವರಿಗೆ ಅಲ್ಲ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ, ಮಾನವತಾವಾದಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ 64ನೆ ಪರಿನಿಬ್ಬಾಣ ದಿನದ ಅಂಗವಾಗಿ ಕಗ್ಗತ್ತಲಲ್ಲಿ ಸಂವಿಧಾನ ಎಂಬ ಘೋಷವಾಕ್ಯದೊಂದಿಗೆ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿ ರವಿವಾರ ನಡೆದ ಕಗ್ಗತ್ತಲ ದಿನಾಚರೆಯಲ್ಲಿ ಅವರು ಮಾತನಾಡುತಿದ್ದರು.

ಎಲ್ಲ ವಿದ್ಯಾರ್ಥಿಗಳಿಗೆ ನೀಡುವ ಸ್ಕಾಲರ್ ಶಿಪ್‌ನ್ನು ಒಂದೇ ಯೋಜನೆಯಡಿ ತಂದು, ಅದಕ್ಕೆ ಪರೀಕ್ಷೆಗಳನ್ನು ನಡೆಸಿ, ಅದರಲ್ಲಿ ತೇರ್ಗಡೆಯಾದ ವಿದ್ಯಾರ್ಥಿ ಗಳಿಗೆ ಮಾತ್ರ ಸ್ಕಾಲರ್‌ಶಿಪ್ ನೀಡುವ ಪ್ರಸ್ತಾವವನ್ನು ಪ್ರಧಾನ ಮಂತ್ರಿ 2020ರ ಮಾರ್ಚ್‌ನಲ್ಲಿ ಘೋಷಣೆ ಮಾಡಿದ್ದಾರೆ. ಇದು ಜಾರಿ ಯಾದರೆ ಮುಂದೆ ಯಾವುದೇ ದಲಿತ ವಿದ್ಯಾರ್ಥಿಗಳಿಗೂ ಸ್ಕಾಲರ್‌ಶಿಪ್ ಸಿಗುವುದಿಲ್ಲ. ಇದರಿಂದ ಬಹುತೇಕ ದಲಿತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ಅವರು ತಿಳಿಸಿದರು.

ಇದು ಕಣ್ಣಿಗೆ ಕಾಣದೆ ಒಳಗಿನಿಂದ ನಡೆಯುತ್ತಿರುವ ಯೋಜನೆಗಳಾಗಿದ್ದು, ಹೊರಗಡೆ ಯಾರು ಗೊತ್ತಾಗುತ್ತಿಲ್ಲ. ಹಾಗಾಗಿ ಇದರ ವಿರುದ್ಧ ಬೀದಿ ಯಲ್ಲಿ ಪ್ರತಿಭಟನೆಗಳು ನಡೆಯುತ್ತಿಲ್ಲ. ಆದುದರಿಂದ ಈ ವಿಚಾರವನ್ನು ಗ್ರಾಮಗ್ರಾಮ ಗಳಲ್ಲಿನ ದಲಿತರಿಗೆ ತಲುಪಿಸುವ ಕಾರ್ಯ ಮಾಡಬೇಕು. ಇದು ಸಂವಿಧಾನ ವನ್ನು ಒಡೆಯುವ ಹುನ್ನಾವಾಗಿದೆ ಎಂದು ಅವರು ದೂರಿದರು.

ದಲಿತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭದ್ರತೆ ಒದಗಿಸಲು ಯಾವುದೇ ರಾಜ್ಯ ಸರಕಾರಗಳು ಸವಾಲು ಮಾಡದಂತೆ ತಡೆಯಲು ಮಾಡಲಾದ ತಿದ್ದುಪಡಿ ಯನ್ನು ಯಾವುದೇ ಕಾಲಕ್ಕೂ ಈ ದೇಶದ ಯಾವುದೇ ಸರಕಾರವು ಮುಟ್ಟದ ರೀತಿಯಲ್ಲಿ ಆಕ್ರಮಣಶೀಲವಾದ ಹೋರಾಟ ಮಾಡ ಬೇಕಾಗಿದೆ. ಅಂಬೇಡ್ಕರ್ ಪ್ರಸ್ತಾವ ಮಾಡಿದ್ದ ಕೃಷಿ ಭೂಮಿ ಹಾಗೂ ಎಲ್ಲ ಕೈಗಾರಿಕೆಗಳನ್ನು ರಾಷ್ಟ್ರೀಕರಣ ಗೊಳಿಸಬೇಕೆಂಬ ವಿಚಾರವನ್ನು ಮೂಲ ಸಂವಿಧಾನಕ್ಕೆ ತರುವ ಕೆಲಸ ಮಾಡ ಬೆೀಕು ಎಂದು ಅವರು ಒತ್ತಾಯಿಸಿದರು.

ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ಬಿಜೆಪಿ ಹಾಗೂ ಆರೆಸ್ಸೆಸ್ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ. ಅವರ ಷಡ್ಯಂತರವನ್ನು ಖಂಡಿಸಿ ಹೋರಾಟ ಮಾಡದಿದ್ದರೆ ಈ ದೇಶದಲ್ಲಿ ಸಮಾನತೆ ಉಳಿಯುವುದಿಲ್ಲ ಮತ್ತು ನಮಗೆ ಯಾವುದೇ ರಕ್ಷಣೆ ಇರುವುದಿಲ್ಲ. ಹೀಗೆ ದೇಶದ ಸಂವಿಧಾನಕ್ಕೆ ಧಕ್ಕೆ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಭಾರತೀಯರ ಏಕೈಕ ಗ್ರಂಥವಾಗಿರುವ ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ಇಂದು ತೊಂದರೆ ಆಗುತ್ತಿದೆ. ಅದರ ಆಶಯಕ್ಕೆ ವಿರುದ್ಧವಾಗಿ ಸರಕಾರಗಳು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀಡುವ ಬದಲು ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದರೊಂದಿಗೆ ದಲಿತರ ಉದ್ಯೋಗವನ್ನು ಕಸಿದುಕೊಳ್ಳುವ ಹುನ್ನಾರವನ್ನು ಸರಾರ ಮಾಡುತ್ತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮ್ ರಾಜ್ ಬಿರ್ತಿ, ಪರಮೇಶ್ವರ ಉಪ್ಪೂರು, ಮುಖಂಡರಾದ ಎಸ್.ಎಸ್. ಪ್ರಸಾದ್, ಮಂಜುನಾಥ್ ಬಾಳ್ಕುದ್ರು, ಶಂಕರ್‌ದಾಸ್ ಚೆಂಡ್ಕಳ, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ಪ್ರೊ.ಸಿರಿಲ್ ಮಥಾಯಸ್ ಮೊದಲಾದವರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನಾ ಉಡುಪಿಯ ಜೋಡುಕಟ್ಟೆಯಿಂದ ಕೋರ್ಟ್ ರಸ್ತೆ, ಕೆಎಂ ಮಾರ್ಗ, ತ್ರಿವೇಣಿ ಸರ್ಕಲ್ ಮಾರ್ಗವಾಗಿ ಬೋರ್ಡ್ ಹೈಸ್ಕೂಲ್ವರೆಗೆ ಮೇಣದ ಬತಿ್ತ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News