ಉಳ್ಳಾಲ ಪರ್ಸಿನ್ ಬೋಟ್ ದುರಂತ : ವಾರ ಕಳೆದರೂ ಪತ್ತೆಯಾಗದ ಮೀನುಗಾರ
Update: 2020-12-06 21:09 IST
ಮಂಗಳೂರು, ಡಿ. 6: ಅರಬ್ಬಿ ಸಮುದ್ರದಲ್ಲಿ ‘ಶ್ರೀರಕ್ಷಾ’ ಪರ್ಸಿನ್ ಬೋಟ್ ಮುಳುಗಡೆಯಾಗಿ ಇನ್ನೂ ನಾಪತ್ತೆಯಾಗಿರುವ ಒಬ್ಬ ಮೀನು ಗಾರನಿಗಾಗಿ ಶೋಧ ಕಾರ್ಯ ರವಿವಾರವೂ ಮುಂದುವರಿದಿತ್ತು. ಆದರೆ ವಾರ ಕಳೆದರೂ ಮೀನುಗಾರನ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ.
ರವಿವಾರ ಕೋಸ್ಟ್ ಗಾರ್ಡ್ ಸಮುದ್ರದಲ್ಲಿ ಶೋಧ ನಡೆಸಿದರೂ ದೇಹ ಪತ್ತೆಯಾಗಿಲ್ಲ. ಈ ನಡುವೆ ಮೀನುಗಾರನ ಪತ್ತೆಗಾಗಿ ಕೇರಳ ಮತ್ತು ಲಕ್ಷದ್ವೀಪ ಕರಾವಳಿ ರಕ್ಷಣಾ ಪಡೆಗೆ ಲುಕ್‌ಔಟ್ ನೋಟಿಸ್ ನೀಡಿ ಮನವಿ ಮಾಡಿದರೂ ಅಲ್ಲಿಂದಲೂ ಯಾವುದೇ ಮಾಹಿತಿ ಈವರೆಗೆ ಲಭಿಸಿಲ್ಲ ಎಂದು ತಿಳಿದುಬಂದಿದೆ.
ನ.30ರಂದು ಸಂಜೆ ವೇಳೆಗೆ ಈ ಬೋಟ್ ಮುಳುಗಡೆಯಾಗಿ ಒಟ್ಟು ಆರು ಮಂದಿ ನಾಪತ್ತೆಯಾಗಿದ್ದರು. ಅವರಲ್ಲಿ ಐವರ ಮೃತದೇಹ ದೊರೆತಿ ದ್ದರೂ ಒಬ್ಬನ ದೇಹ ಇನ್ನೂ ಸಿಕ್ಕಿಲ್ಲ.