×
Ad

ಮಂಗಳೂರು: ಶಿವಾಜಿ ಮೂರ್ತಿ ಇರಿಸಲು ಕಟ್ಟಲಾಗಿದ್ದ ಕಟ್ಟೆ ತೆರವು

Update: 2020-12-06 21:27 IST

ಮಂಗಳೂರು, ಡಿ.6: ನಗರದ ಹೊರವಲಯದ ಪದವಿನಂಗಡಿ ಬಳಿ ಅಶ್ವತ್ಥಮರದ ಕಟ್ಟೆ ಎದುರುಗಡೆ ಶಿವಾಜಿ ಮೂರ್ತಿ ಇರಿಸಲು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮುಂದಾಗಿದ್ದು, ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಮೂರ್ತಿ ಇರಿಸಲು ಕಟ್ಟಲಾಗಿದ್ದ ಕಟ್ಟೆಯನ್ನು ತೆರವುಗೊಳಿಸಿದ್ದಾರೆ.

ಅಶ್ವತ್ಥಕಟ್ಟೆಯ ಎದುರಿನ ಜಾಗದಲ್ಲಿ ಶಿವಾಜಿ ಮೂರ್ತಿ ಇರಿಸಲು ಹಿಂಜಾವೇ ಕಾರ್ಯಕರ್ತರು ಶನಿವಾರ ರಾತ್ರಿ ಕಟ್ಟೆಯೊಂದನ್ನು ಕಟ್ಟಿ ಕೆಲಸ ಆರಂಭಿಸಲು ಮುಂದಾದಾಗ ಇನ್ನೊಂದು ಗುಂಪಿನಿಂದ ವಿರೋಧ ವ್ಯಕ್ತವಾಯಿತು. ಈ ವಿಚಾರ ಪೊಲೀಸರಿಗೆ ಗೊತ್ತಾಯಿತು. ರವಿವಾರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಕರ್ತರಿಂದಲೇ ಕಟ್ಟೆಯನ್ನು ತೆರವುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News