ಯೋಧನ ಜೀವ ಉಳಿಸಲು ಹೋಗಿ ಬಲಗೈ ಕಳೆದುಕೊಂಡಿದ್ದ ಮಹಿಳೆ ಈಗ ಕೇರಳದ ಪಂಚಾಯತ್ ಚುನಾವಣೆಯ ಅಭ್ಯರ್ಥಿ

Update: 2020-12-06 16:29 GMT

ಪಾಲಕ್ಕಾಡ್: 2010ರಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಸಿಐಎಸ್ ಎಫ್ ಯೋಧನ ಜೀವವನ್ನು ಉಳಿಸಿ, ನಂತರ ಯೋಧನನ್ನೇ ಪ್ರೀತಿಸಿ ಮದುವೆಯಾಗಿ ಕೇರಳದಲ್ಲಿ ನೆಲೆಸಿರುವ ಛತ್ತೀಸ್ ಗಢ ಮೂಲದ 30ರ ವಯಸ್ಸಿನ ಜ್ಯೋತಿ ಡಿಸೆಂಬರ್ 10 ರಂದು ಕೇರಳದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

2010ರ ಜನವರಿ 3 ರಂದು ಘಟನೆ ನಡೆದಿದ್ದು,ಆಗ ನಾನು ನನ್ನ ಬಲಗೈ ಕಳೆದುಕೊಂಡಿದ್ದೆ. ಇದುವೆ ನನ್ನ ಜೀವನಕ್ಕೆತಿರುವು ನೀಡಿತ್ತು ಎಂದು  ಮಲಯಾಳಂ ಭಾಷೆಯನ್ನು ಚೆನ್ನಾಗಿ ಬಲ್ಲ ಜ್ಯೋತಿ ಹೇಳಿದ್ದಾರೆ.

ಘಟನೆಯ ಬಳಿಕ ಛತ್ತೀಸ್ ಗಢದಲ್ಲಿ ಹೆತ್ತವರ ಕೋಪಕ್ಕೆ ಒಳಗಾಗಿದ್ದಲ್ಲದೆ ಬಿಎಸ್ ಸಿ ನರ್ಸಿಂಗ್ ಕೋರ್ಸ್ ನ್ನು ಒತ್ತಾಯಪೂರ್ವಕವಾಗಿ ನಿಲ್ಲಿಸಬೇಕಾಯಿತು. ಘಟನೆ ನಡೆದು ವರ್ಷದ ಬಳಿಕ ಕೇರಳಕ್ಕೆ ಬಂದಿದ್ದ ಜ್ಯೋತಿ ಯೋಧ ವಿಕಾಸ್ ರನ್ನುವಿವಾಹವಾದರು. ವಿವಾಹಕ್ಕೆ ವಿಕಾಸ್ ಮನೆಯವರು ಸಮ್ಮತಿಸಿದರು.

10 ವರ್ಷದ ಹಿಂದಿನ ಘಟನೆಯನ್ನು ನೆನಪಿಸಿಕೊಂಡ ಜ್ಯೋತಿ, ನಾನು ನನ್ನ ಕಾಲೇಜ್ ಹಾಸ್ಟೆಲ್ ನಿಂದ ಬಸ್ ನಲ್ಲಿ ತೆರಳುತ್ತಿದ್ದಾಗ ವಿಕಾಸ್ ನನ್ನ ಮುಂದಿನ ಸೀಟಿನಲ್ಲಿ ಕುಳಿತ್ತಿದ್ದರು. ತನ್ನ ಸಹೋದರನನ್ನುಭೇಟಿಯಾಗಿ ದಾಂತೇವಾಡ ಜಿಲ್ಲೆಯಲ್ಲಿರುವ ತಮ್ಮ ಶಿಬಿರಕ್ಕೆ ಅವರು ವಾಪಸಾಗುತ್ತಿದ್ದರು. ಅವರು ಬಸ್ಸಿನ ಕಿಟಕಿಯ ಸರಳಿನ ಮೇಲೆ ತಲೆ ಇಟ್ಟುಕೊಂಡು ನಿದ್ದೆಗೆ ಜಾರಿದ್ದರು. ಆಗ ಟ್ರಕ್ ವೊಂದು ಬಸ್ ನತ್ತ ತಾಗಿಕೊಂಡು ಬರುವುದನ್ನು ಗಮನಿಸಿ ಅಪಾಯದ ಅರಿವಾಗಿ ವಿಕಾಸ್ ಅವರು  ಕುಳಿತ್ತಿದ್ದ ಮುಂದಿನ ಸೀಟಿನತ್ತ ಧಾವಿಸಿ ಅವರನ್ನು ಕಿಟಕಿಯಿಂದ ಬರ ಸೆಳೆದೆ. ಆಗ ನನ್ನ ಬಲಗೈಗೆ ತೀವ್ರ ಸ್ವರೂಪದ ಗಾಯವಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News