ಮಾನವ ಸಮನ್ವಯ ಸಾಹಿತ್ಯ ಪರಿಷತ್ ವತಿಯಿಂದ 'ಸಾಹಿತ್ಯ ಮತ್ತು ಸಮಾಜ' ವಿಚಾರಗೋಷ್ಠಿ
ವಿಟ್ಲ : ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟುವ ಕೆಲಸಕ್ಕೆ ಎಲ್ಲಾ ಸಮುದಾಯದ ಬರಹಗಾರರು ಮುಂದಾದಾಗ ಶಾಂತಿ, ಸೌಹಾರ್ದತೆ ಮತ್ತು ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತದೆ ಎಂದು ಸಾಹಿತಿ ಸಾಲೆತ್ತೂರು ಅಬೂಬಕರ್ ಫೈಝಿ ಹೇಳಿದ್ದಾರೆ.
ಮಾನವ ಸಮನ್ವಯ ಸಾಹಿತ್ಯ ಪರಿಷತ್ ವತಿಯಿಂದ ನಡೆದ "ಸಾಹಿತ್ಯ ಮತ್ತು ಸಮಾಜ" ಎಂಬ ಆನ್‌ಲೈನ್ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಖ್ಯಾತ ವಿದ್ವಾಂಸ ಎಸ್.ಬಿ.ಮುಹಮ್ಮದ್ ದಾರಿಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಅಧ್ಯಕ್ಷ ಎಚ್.ಭೀಮರಾವ್ ವಾಷ್ಠರ್ ಸುಳ್ಯ ವಿಷಯ ಮಂಡನೆ ಮಾಡಿದರು. ಸಾಹಿತಿ ಗಣೇಶ್ ಮಂಜೇಶ್ವರ ದಿಕ್ಸೂಚಿ ಭಾಷಣ ಮಾಡಿದರು.
ಎ.ಇಬ್ರಾಹಿಂ ಖಲೀಲ್ ಫೈಝಿ ಪುಣಚ, ಅನ್ಸಾರ್ ಕಾಟಿಪಳ್ಳ, ಎ.ಕೆ.ನಂದಾವರ, ಸುಹೇಬ್ ಪರಮವಾಡಿ ಹಾವೇರಿ, ಬಿ.ಎಸ್.ಇಸ್ಮಾಯಿಲ್ ಕುತ್ತಾರ್, ಎಂ.ಎ.ಮುಸ್ತಫಾ ಬೆಳ್ಳಾರೆ, ಆಮಿರ್ ಬನ್ನೂರು, ಎ.ಬಿ.ಮೊಹಿದೀನ್ ಕಳಂಜ, ಎಂ.ಬಿ. ಸದಾಶಿವ ಸುಳ್ಯ ಮೊದಲಾದವರು ಮಾತನಾಡಿದರು.
ಎಂ.ಎಸ್.ಜಲ್ಲಿ, ಬದ್ರುದ್ದೀನ್ ಗರಡಿ, ಅಬ್ದುರ್ರಹ್ಮಾನ್ ತುಂಬೆ, ಬಿ.ಜೆ.ನರಸಿಂಹ ಮೂರ್ತಿ ಬೆಂಗಳೂರು, ಅಡ್ವಕೇಟ್ ಲುಕ್ಮಾನ್ ಸಅದಿ ಅಡ್ಯಾರ್, ಅಫ್ನಾಶ್ಫೀ ಕರಾಯ, ಎಲ್.ಎಸ್.ಬಿ. ಹನೀಫಿ ಸಜಿಪ, ಅಲ್ತಾಫ್ ಬಿಳಗುಳ, ಜುನೈದ್ ಉಪ್ಪಳ, ದಿಲೀಪ್ ವೇದಿಕ್ ಕಡಬ, ಕೆ.ಎಂ.ಇಖ್ಬಾಲ್ ಬಾಳಿಲ, ಮುಖ್ಯ ಅತಿಥಿಗಳಾಗಿದ್ದರು.
ಮಂಗಳ ಕಲಾ ಸಾಹಿತ್ಯ ವೇದಿಕೆ ದ.ಕ.ಜಿಲ್ಲಾಧ್ಯಕ್ಷ ಎ.ಅಬೂಬಕರ್ ಅನಿಲಕಟ್ಟೆ ವಿಟ್ಲ ಸ್ವಾಗತಿಸಿ, ಕವಿ ಸಮ್ಯಕ್ತ್ ಜೈನ್ ಕಡಬ ಕೃತಜ್ಞತೆ ಸಲ್ಲಿಸಿದರು. ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಕಾರ್ಯಕ್ರಮ ನಿರೂಪಿಸಿದರು.