×
Ad

ಮಂಗಳೂರು ವಿವಿ; ಬ್ಯಾರಿ ಕಲಾ ಪ್ರಕಾರದ ಡಿಪ್ಲೊಮಾ ಕೋರ್ಸ್ : ಪಠ್ಯಪುಸ್ತಕ ರಚನಾ ಸಮಿತಿಗೆ ಆಯ್ಕೆ

Update: 2020-12-07 17:39 IST

ಮಂಗಳೂರು, ಡಿ.7: ಮಂಗಳೂರು ವಿಶ್ವವಿದ್ಯಾನಿಲಯವು ಸಾಂಪ್ರದಾಯಿಕ ಕಲೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 2021-22ನೆ ಶೈಕ್ಷಣಿಕ ವರ್ಷದಲ್ಲಿ ಬ್ಯಾರಿ ಜಾನಪದ ಕಲೆಗಳಾದ ದಫ್, ಬುರ್ದಾ, ಮೆಹಂದಿ, ಒಪ್ಪನೆ ಪಾಟ್ ಮತ್ತು ಕೋಲ್ಕಲಿ ನೃತ್ಯ ಪ್ರಕಾರಗಳ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ ನಡೆಸಲು ಅವಕಾಶ ನೀಡಿದೆ ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.

ನಗರದ ತಾಪಂ ಕಟ್ಟಡದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಕಾಡಮಿಯು ಈ ನಿಟ್ಟಿನಲ್ಲಿ ಸಲ್ಲಿಸಿದ್ದ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. ಅಲ್ಲದೆ ವಿಶ್ವವಿದ್ಯಾನಿಲಯದ ಕೋರಿಕೆಯ ಮೇರೆಗೆ ಮುಂದಿನ ಶೈಕ್ಷಣಿಕ ವರ್ಷದ ಡಿಪ್ಲೊಮಾ ಕೋರ್ಸ್‌ನ ಪಠ್ಯಪುಸ್ತಕ ರಚನಾ ಸಮಿತಿಗೆ ಅಕಾಡಮಿಯ ಮಾಜಿ ಸದಸ್ಯರಾದ ಬಶೀರ್ ಬೈಕಂಪಾಡಿ, ಮರಿಯಂ ಇಸ್ಮಾಯೀಲ್, ಉಪನ್ಯಾಸಕ ಅಬ್ದುರ್ರಝಾಕ್ ಅನಂತಾಡಿ, ಧರ್ಮಗುರುಗಳಾದ ಎಸ್.ಬಿ. ದಾರಿಮಿ, ಕೆಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಸಹಾಯಕ ಪ್ರಾಧ್ಯಾಪಕ ಹೈದರಾಲಿ, ದಫ್ ಉಸ್ತಾದ್ ನೂರ್ ಮುಹಮ್ಮದ್, ರಹೀಸ್ ಕಣ್ಣೂರು, ಬ್ಯಾರಿ ಅಧ್ಯಯನ ಪೀಠದ ಸದಸ್ಯ ಅಹ್ಮದ್ ಬಾವ ಮೊಹಿದಿನ್ ಪಡೀಲ್, ಝುಲ್ಪಿಕರ್ ಅಹ್ಮದ್ ಮಂಗಳೂರು ಅವರನ್ನು ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News