ನಿವೃತ್ತ ಸರಕಾರಿ ನೌಕರರಿಗೂ ಆರೋಗ್ಯ ಸೇವಾ ಸೌಲಭ್ಯ ನೀಡಲು ಒತ್ತಾಯ
Update: 2020-12-07 19:54 IST
ಉಡುಪಿ, ಡಿ.7: ರಾಜ್ಯದ 5.40 ಲಕ್ಷ ಸರಕಾರಿ ನೌಕರಿಗೆ, ಅವರ ಅವಲಂಬಿತ 25 ಲಕ್ಷ ಮಂದಿಗೆ ನಗದು ರಹಿತ ಆರೋಗ್ಯ ಸೇವೆ ಸೌಲಭ್ಯ ಜಾರಿಗೊಳಿಸಲು ಸರಕಾರ ಒಪ್ಪಿಗೆ ನೀಡಿದೆ. 2021ರ ಎಪ್ರಿಲ್ನಿಂದ ಇದು ಜಾರಿಗೆ ಬರಲಿದೆ ಎಂದು ಸರಕಾರಿ ನೌಕರರ ರಾಜ್ಯ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ಘೋಷಿಸಿದ್ದಾರೆ.
ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘವೂ ವ್ಯೆದ್ಯಕೀಯ ಸೌಲಭ್ಯಕ್ಕಾಗಿ ಒತ್ತಾಯ ಮಾಡುತ್ತಲೇ ಬಂದಿದೆ. ಆದರೆ ಜ್ಯೋತಿ ಸಂಜೀವಿನಿ ವ್ಯೆದ್ಯಕೀಯ ಸೌಲಭ್ಯವನ್ನೂ ನೀಡಿದೆ ಸುಮಾರು 5ಲಕ್ಷ ನಿವೃತ್ತ ನೌಕರರ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ ತೋರಿದೆ ಎಂದು ದೂರಿರುವ ಉಡುಪಿ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಎಸ್.ಎಸ್. ತೋನ್ಸೆ ಶೀಘ್ರ ನಿವೃತ್ತರ ಬೇಡಿಕೆ ಯನ್ನು ಈಡೇರಿಸುವಂತೆ ಮನವಿ ಮಾಡಿದ್ದಾರೆ.