×
Ad

ವಿಕಲಚೇತನರ ಬಸ್‌ಪಾಸ್‌ಗೆ ಅರ್ಜಿ ಆಹ್ವಾನ

Update: 2020-12-07 20:18 IST

ಮಂಗಳೂರು, ಡಿ.7: ಪ್ರಸಕ್ತ ಸಾಲಿನಲ್ಲಿ ಹೊಸದಾಗಿ/ ನವೀಕರಣದ ವಿಕಲಚೇತನರ ರಿಯಾಯತಿ ಬಸ್ ಪಾಸ್‌ಗಾಗಿ ಆನ್‌ಲೈನ್‌ನಲ್ಲಿ ಸರಕಾರ ನಿಗದಿ ಪಡಿಸಿರುವ ಸೇವಾ ಸಿಂಧೂ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅರ್ಜಿಯನ್ನು ಜ.1ರಿಂದ ಡಿ.31ರವರೆಗೆ ಸಲ್ಲಿಸಬಹುದು. ಅರ್ಜಿಯನ್ನು ಆನ್‌ಲೈನಲ್ಲಿ ಸರ್ಕಾರ ನಿಗದಿ ಪಡಿಸಿರುವ ಸೇವಾ ಸಿಂಧೂ ಪೋರ್ಟಲ್‌ ನಲ್ಲಿ ಅವಕಾಶ ಕಲ್ಪಿಸಲಾಗಿದೆ.

ವಿಕಲಚೇತನ ಅರ್ಜಿದಾರರು ಆನ್‌ಲೈನಲ್ಲಿ ತಮ್ಮ ವಿವರಗಳನ್ನು ಭರ್ತಿಗೊಳಿಸಿ ಅಗತ್ಯ ದಾಖಲೆಗಳನ್ನು ಜೆಪಿಜೆ ಅಥವಾ ಪಿಡಿಎಫ್ ನಮೂನೆ ಯಲ್ಲಿ ಆನ್‌ಲೈನಲ್ಲಿ ಅಡಕಗೊಳಿಸುವುದು. ಬಸ್ ಪಾಸ್ ನವೀಕರಿಸಿಕೊಳ್ಳುವವರು ಕ.ರಾ.ರ.ಸಾ ನಿಗಮದ ಬಸ್ ನಿಲ್ದಾಣದ ಪಾಸ್ ಕೌಂಟರ್ ‌ಗಳಲ್ಲಿ ಹಾಗೂ ಹೊಸದಾಗಿ ಪಾಸ್ ಪಡೆಯುವವರು ವಿಭಾಗೀಯ ಕಚೇರಿಯಲ್ಲಿ ಹಣ ಪಾವತಿಸಲು ಅವಕಾಶವಿದೆ.

ಹೆಚ್ಚಿನ ಮಾಹಿತಿಗಾಗಿ https://serviceonline.gov.in/karnataka ಅಥವಾ ದೂ.ಸಂ.: 0824- 2458173, 2455999 ಅಥವಾ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಲು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News