ಶಿಕ್ಷಕನಿಂದ ಪತ್ನಿಗೆ ದೈಹಿಕ ಹಿಂಸೆ: ಪ್ರಕರಣ ದಾಖಲು
Update: 2020-12-07 21:51 IST
ಹಿರಿಯಡ್ಕ, ಡಿ.7: ತನ್ನ ಪತ್ನಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡು ತ್ತಿರುವ ಶಿಕ್ಷಕನ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಕ್ಕರ್ಣೆ ಹೈಸೂಲ್‌ನಲ್ಲಿ ಶಿಕ್ಷಕರಾಗಿರುವ ಬೈಂದೂರಿನ ಸತೀಶ ಜಿ., ಹಿರಿಯಡ್ಕದಲ್ಲಿರುವ ತನ್ನ ಪತ್ನಿ ಅನುಷಾ ರೋಹಿಣಿ(45) ಎಂಬವರಿಗೆ ವಿವಿಧ ರೀತಿಯಲ್ಲಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಅವರ ಎಲ್ಲ ಖರ್ಚುಗಳನ್ನು ಅನುಷಾ ಅವರೇ ನೋಡಿಕೊಳ್ಳುತ್ತಿದ್ದಾರೆ.
ನ.2ರಂದು ರಾತ್ರಿ ಸತೀಶ್, ಅನುಷಾ ಹಾಗೂ ಅವರ ಕಿರಿಯ ಮಗನಿಗೆ ಅವಾಚ್ಯ ಶಬ್ದಗಳಿಂದ ಬೈದು, ಥಳಿಸಿ, ಹಲ್ಲೆ ನಡೆಸಿದ್ದರು. ಅನುಷಾ ಅವರನ್ನು ಕೊಲ್ಲುವ ಉದ್ದೇಶದಿಂದ ಹೊಡೆದಿದ್ದು, ಅಡ್ಡ ಬಂದ ಮಗನಿಗೆ ಹೊಡೆದು, ತುಳಿದು ಹಾಕಿದರು ಎಂದು ದೂರಲಾಗಿದೆ. ಅನುಷಾ ಅವರ ಗರ್ಭಕೋಶಕ್ಕೆ ತುಳಿದ ಪರಿಣಾಮ ಅತಿಯಾದ ರಕ್ತಸ್ರಾವ ಆಗಿರುವುದಾಗಿ ದೂರಿನಲ್ಲಿ ತಿಳಿಸ ಲಾಗಿದೆ.