ಉಡುಪಿ ಜಿಲ್ಲೆಯಲ್ಲಿ ನಾಟಕ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಅನುಮತಿ
Update: 2020-12-07 21:55 IST
ಉಡುಪಿ, ಡಿ.7: ಕಳೆದ 9 ತಿಂಗಳುಗಳ ಕಾಲ ಕೊರೋನಾದಿಂದ ಸ್ಥಗಿತ ಗೊಂಡಿದ್ದ ನಾಟಕ ಪ್ರದರ್ಶನಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅನು ಮತಿ ನೀಡಿದ್ದಾರೆ.
ಕೊರೋನದಿಂದ ಸ್ಥಗಿತಗೊಂಡಿದ್ದ ನಾಟಕ ಪ್ರದರ್ಶನಕ್ಕೆ ಅನುಮತಿ ನೀಡು ವಂತೆ ಒತ್ತಾಯಿಸಿ ಜಿಲ್ಲೆಯ ವೃತ್ತಿಪರ ನಾಟಕ ತಂಡಗಳ ಪರವಾಗಿ ಹಿರಿಯ ಕಲಾವಿದ ಲೀಲಾಧರ ಶೆಟ್ಟಿ ಕರಂದಾಡಿ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಸರಕಾರದ ಕೋವಿಡ್ 19 ನಿಯಮಗಳನ್ನು ಪಾಲಿಸಿಕೊಂಡು ನಾಟಕ ಪ್ರದರ್ಶನ ಮಾಡುವಂತೆ ಅನುಮತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಕಲಾವಿದರಾದ ಪ್ರಸನ್ನ ಕಾಪು, ಮಾರ್ವಿನ್ ಮೊದಲಾದವರು ಉಪಸ್ಥಿತರಿದ್ದರು.