×
Ad

ಡಿಕೆಎಸ್ ಸಿ : ದಮ್ಮಾಮ್ ಝೋನ್ 25ನೇ ವಾರ್ಷಿಕ ಮಹಾಸಭೆ

Update: 2020-12-07 22:36 IST
ಅಬ್ದುಲ್‍ ರಹ್ಮಾನ್, ಮುಹಮ್ಮದ್ ರೋಯಲ್, ಅಬೂಬಕ್ಕರ್

ಮಂಗಳೂರು : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ಇದರ ಅಧೀನದ ದಮ್ಮಾಮ್ ಝೋನ್ 25ನೇ ವಾರ್ಷಿಕ ಮಹಾಸಭೆ ದಮ್ಮಾಮ್‍ನಲ್ಲಿ ವಲಯಾಧ್ಯಕ್ಷ  ಹಸನ್ ಬಾವ, ಕುಪ್ಪೆಪದವು ಅಧ್ಯಕ್ಷತೆಯಲ್ಲಿ ನಡೆಯಿತು.

ಮಾಜಿ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಉಳ್ಳಾಲ ದುಆದೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ ಜುಬೈಲ್ ಘಟಕದ ಅಧ್ಯಕ್ಷ ಸಮೀರ್ ಕಣ್ಣಂಗಾರ್ ಖಿರಾಅತ್ ಪಠಿಸಿದರು.

ವಲಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮೂಡುತೋಟ ಸ್ವಾಗತಿಸಿ, ಕೇಂದ್ರ ಕಚೇರಿ ಕಾರ್ಯದರ್ಶಿ ಇಸ್ಮಾಯಿಲ್ ಕಾಟಿಪಳ್ಳ ವಾರ್ಷಿಕ ವರದಿ ವಾಚಿಸಿದರು ಹಾಗೂ ವಲಯ ಜೊತೆ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಪುತ್ತೂರು ಪ್ರವರ್ತನಾ ವರದಿಯನ್ನು ಮಂಡಿಸಿ ಸಭೆಯ ಅನುಮೋದನೆಯನ್ನು ಪಡೆದರು.

2021ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರನ್ನು ಡಿ.ಕೆ.ಎಸ್.ಸಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಸನ್ ಮೂಡುತೋಟ ರಿಯಾದ್ ದಲ್ಲಾ ಘಟಕದ ಪ್ರಥಮ ಅಧ್ಯಕ್ಷ ಸಯ್ಯಿದ್ ಬಾವ ಬಜ್ಪೆಯವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ಡಿಕೆಯಸ್ಸಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷ ಹಾತಿಂ ಕಂಚಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಸನ್ ಮೂಡುತೋಟ ಮತ್ತು ಉಪಾಧ್ಯಕ್ಷ ಕೆ.ಎಚ್.ರಫೀಕ್ ಸೂರಿಂಜೆ ಉಪಸ್ಥಿತರಿದ್ದರು.

ಕೇಂದ್ರ ಸಮಿತಿಯ ಕಮ್ಯುನಿಕೇಶನ್ ಸೆಕ್ರೆಟರಿ ಅಬ್ದುಲ್‍ಅಝೀಝ್ ಆತೂರು ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷ  ಹಸನ್ ಬಾವ ಕುಪ್ಪೆಪದವು, ಅಧ್ಯಕ್ಷರಾಗಿ ಇಂಜಿನಿಯರ್ ಅಬ್ದುಲ್‍ ರಹ್ಮಾನ್ ಪಾಣಾಜೆ, ಪ್ರಧಾನ ಕಾರ್ಯದರ್ಶಿಯಾಗಿ  ಮುಹಮ್ಮದ್ ರೋಯಲ್ ಪುತ್ತೂರು ಹಾಗೂ ಕೋಶಾಧಿಕಾರಿಯಾಗಿ ಅಬೂಬಕ್ಕರ್ ಅಜಿಲಮೊಗರು ಆಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಉಸ್ಮಾನ್ ಹೊಸಂಗಡಿ, ಅಬ್ದುಲ್‍ ಅಝೀಝ್ ಮೂಳೂರು,  ಹೈದರ್ ಅಲಿ ಬಜ್ಪೆ, ಕಾರ್ಯದರ್ಶಿಗಳಾಗಿ ಇಸ್ಮಾಯಿಲ್ ಕಾಟಿಪಳ್ಳ, ಸಮೀರ್ ಕೃಷ್ಣಾಪುರ, ಅನ್ವರ್ ಪಡುಬಿದ್ರಿ ಆಯ್ಕೆಗೊಳಿಸಲಾಯಿತು. ಘಟಕಗಳ ಉಸ್ತುವಾರಿಗಳಾಗಿ ದಮ್ಮಾಮ್‍ಗೆ ಅಬೂಬಕ್ಕರ್ ಬರ್ವ, ಜುಬೈಲ್‍ಗೆ ಅಬ್ದುಲ್‍ ಅಝೀಝ್‍ ಆತೂರು, ಅಲ್‍ಖೋಬರ್‍ಗೆ ಅಬ್ದುಲ್‍ ಗಫೂರ್ ಸಜಿಪ, ಅಲ್ ಹಸ್ಸಾಕ್ಕೆ ಇಸ್ಮಾಯಿಲ್ ಹೊಸಂಗಡಿ, ತುಕ್ಬಾಕ್ಕೆ ಅಬ್ದುಲ್‍ ಅಝೀಝ್ ಮೂಡುತೋಟ, ಹಫರುಲ್ ಬಾತಿನ್‍ಗೆ ಅಬ್ದುಲ್‍ ಕರೀಂ ಪಾಣೆಮಂಗಳೂರು ಅವರಿಗೆ ನೀಡಲಾಯಿತು.

ನೂತನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಪುತ್ತೂರು ವಂದಿಸಿದರು. ಇಸ್ಮಾಯಿಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News