ಮಂಗಳೂರಲ್ಲಿ ಹೊಡೆದಾಟ: ರೌಡಿಶೀಟರ್ ಪೊಲೀಸ್ ವಶಕ್ಕೆ
Update: 2020-12-07 22:43 IST
ಮಂಗಳೂರು : ಮದುವೆ ಕಾರ್ಯಕ್ರಮವೊಂದರಲ್ಲಿ ನಡೆದ ಹೊಡೆದಾಟಕ್ಕೆ ಸಂಬಂಧಿಸಿ ರೌಡಿ ಶೀಟರ್ ಓರ್ವನನ್ನು ಕಂಕನಾಡಿ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರು ವಶಕ್ಕೆ ಪಡೆದಾತನನ್ನು ಸ್ಥಳೀಯ ನಿವಾಸಿ, ರೌಡಿಶೀಟರ್ ಗೌರೀಶ್ ಎಂದು ತಿಳಿದುಬಂದಿದೆ.
ಸೋಮವಾರ ಸಂಜೆ ವೇಳೆ ನಗರದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮವೊಂದರಲ್ಲಿ ಆತ ಭಾಗಿಯಾಗಿದ್ದ. ಈ ವೇಳೆ ಆರಂಭವಾದ ಮಾತಿನ ಚಕಮಕಿಯು ಹೊಡೆದಾಟಕ್ಕೆ ತಿರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.