ಬೇಸಿಗೆಯ ಕಾಡ್ಗಿಚ್ಚಿನಿಂದ 60,000 ಕೋಲಾಗಳಿಗೆ ಹಾನಿ
Update: 2020-12-07 23:57 IST
ಸಿಡ್ನಿ (ಆಸ್ಟ್ರೇಲಿಯ), ಡಿ. 7: ಆಸ್ಟ್ರೇಲಿಯದಲ್ಲಿ ಕಳೆದ ಬೇಸಿಗೆಯಲ್ಲಿ ಸಂಭವಿಸಿದ ಕಾಡ್ಗಿಚ್ಚಿನಲ್ಲಿ 60,000ಕ್ಕೂ ಅಧಿಕ ಕೋಲಾಗಳು ಸಾವಿಗೀಡಾಗಿವೆ, ಗಾಯಗೊಂಡಿವೆ ಅಥವಾ ನಿರ್ವಸಿತವಾಗಿವೆ ಎಂದು ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (ಡಬ್ಲುಡಬ್ಲುಎಫ್) ಅಂದಾಜಿಸಿದೆ. ಈಗಾಗಲೇ ಸಂಕಷ್ಟದಲ್ಲಿರುವ ಈ ಪ್ರಾಣಿ ಪ್ರಭೇದಕ್ಕೆ ಈ ಸಂಖ್ಯೆ ಅತ್ಯಂತ ಆಘಾತಕಾರಿಯಾಗಿದೆ.
ಕಳೆದ ಬೇಸಿಗೆಯಲ್ಲಿ ಸಂಭವಿಸಿದ ಕಾಡ್ಗಿಚ್ಚಿನಲ್ಲಿ 33 ಮಾನವರೂ ಬೆಂದು ಹೋಗಿದ್ದಾರೆ ಹಾಗೂ ದೇಶದ 5.9 ಕೋಟಿ ಎಕರೆ ಅರಣ್ಯ ಸುಟ್ಟು ಹೋಗಿದೆ.
ಸುಮಾರು 300 ಕೋಟಿ ಪ್ರಾಣಿಗಳು ಕಾಡ್ಗಿಚ್ಚಿನ ಪಥದಲ್ಲಿದ್ದವು ಎಂದು ಡಬ್ಲುಡಬ್ಲುಎಫ್ ಹೇಳಿದೆ.
ಕಾಡ್ಗಿಚ್ಚಿನ ಮುನ್ನವೇ ಕೃಷಿಗಾಗಿ ಜಮೀನು ಒತ್ತುವರಿ, ನಗರಾಭಿವೃದ್ಧಿ, ಗಣಿಗಾರಿಕೆ ಮುಂತಾದ ಚಟುವಟಿಕೆಗಳಿಂದಾಗಿ ಕೋಲಾಗಳ ವಾಸಸ್ಥಾನವು ಕುಂಠಿತಗೊಂಡಿತ್ತು.